ಪಾಕಿಸ್ತಾನದ ಅವಸ್ಥೆಯೇ... ಶ್ರೀಲಂಕಾಗೆ ಅವಧಿ ಮೀರಿದ ಆಹಾರ ಸಾಮಗ್ರಿ ಕಳುಹಿಸಿದ ಪಾಕ್

Krishnaveni K
ಮಂಗಳವಾರ, 2 ಡಿಸೆಂಬರ್ 2025 (16:47 IST)
Photo Credit: X
ಕೊಲಂಬೊ: ಶ್ರೀಲಂಕಾದಲ್ಲಿ ದಿತ್ವಾ ಚಂಡಮಾರುತದಿಂದ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುತ್ತೇನೆಂದು ಪಾಕಿಸ್ತಾನ ಅವಧಿ ಮೀರಿದ ಆಹಾರ ಸಾಮಗ್ರಿಗಳನ್ನು ಕಳುಹಿಸಿ ತನ್ನ ಮಾನ ತಾನೇ ಕಳೆದುಕೊಂಡಿದೆ.

ಶ್ರೀಲಂಕಾದಲ್ಲಿ ದಿತ್ವಾ ಚಂಡಮಾರುತದಿಂದ ಸಾವಿರಾರು ಮಂದಿ ಅತಂತ್ರರಾಗಿದ್ದಾರೆ. ಮನೆ, ಮಠ ಕಳೆದುಕೊಂಡು ಊಟಕ್ಕೂ ಪರದಾಡುವ ಪರಿಸ್ಥಿತಿಯಾಗಿದೆ. ಇದೀಗ ಲಂಕಾ ನೆರವಿಗೆ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಧಾವಿಸಿವೆ.

ತಾನೂ ನೆರವು ನೀಡುವುದಾಗಿ ಭಾರತದ ಬಳಿ ಮನವಿ ಮಾಡಿ ನಮ್ಮ ವಾಯು ಪ್ರದೇಶ ಬಳಸಿಕೊಂಡು ಪಾಕಿಸ್ತಾನ ಲಂಕಾಗೆ ಆಹಾರ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿತ್ತು. ಇದರ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಬೀಗಿತ್ತು.

ಆದರೆ ಈ ಫೋಟೋಗಳಲ್ಲಿ ಆಹಾರ ಸಾಮಗ್ರಿ ಮೇಲೆ ಬರೆದಿರುವ ದಿನಾಂಕವನ್ನು ಯಾರೋ ಪತ್ತೆ ಹಚ್ಚಿ ವೈರಲ್ ಮಾಡಿದ್ದಾರೆ. ಆಹಾರ ಸಾಮಗ್ರಿಗಳು ಅವಧಿ ಮೀರಿವೆ ಎನ್ನುವುದು ಪತ್ತೆಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ತನ್ನ ಬಂಡವಾಳ ಬಯಲಾಗುತ್ತಿದ್ದಂತೇ ಪೋಸ್ಟ್ ಗಳನ್ನು ಪಾಕ್ ಡಿಲೀಟ್ ಮಾಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಿಟ್ಟು ಬೀಸಲೆಂದು ಗಿರಣಿಗೆ ತೆರಳಿದ್ದ ಬಾಲಕಿ ಮೇಲೆ ಗ್ಯಾಂಗ್ ರೇಪ್

ಸಿದ್ದರಾಮಯ್ಯ, ಶಿವಕುಮಾರ್ ಬ್ರೇಕ್‌ಫಾಸ್ಟ್‌ ಮೀಟಿಂಗ್ ಕಥೆ ಬಿಚ್ಚಿಟ್ಟ ಜೆಡಿಎಸ್

ಪೋಕ್ಸೋ ಪ್ರಕರಣದಲ್ಲಿ ಬಿಎಸ್ ಯಡಿಯೂರಪ್ಪ ಬಿಗ್ ರಿಲೀಫ್‌

ಡಿಕೆ ಶಿವಕುಮಾರ್ ಮನೆ ಬ್ರೇಕ್ ಫಾಸ್ಟ್ ಮುಗಿಸಿ ಸಿದ್ದರಾಮಯ್ಯ ನೇರವಾಗಿ ಹೋಗಿದ್ದು ಇಲ್ಲಿಗೆ

ಸ್ಮಾರ್ಟ್ ಮೀಟರ್ ಹಗರಣದಲ್ಲಿ ಇಂಧನ ಸಚಿವ ಕೆ.ಜೆ ಜಾರ್ಜ್‌ಗೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್‌

ಮುಂದಿನ ಸುದ್ದಿ
Show comments