ಕೊನೆಗೂ ಸತ್ಯ ಒಪ್ಪಿಕೊಂಡ ಪಾಕ್ ಪ್ರಧಾನಿ ಇಮ್ರಾನ್ ಖಾನ್

ಗುರುವಾರ, 25 ಜುಲೈ 2019 (07:56 IST)
ವಾಷಿಂಗ್ಟನ್ : ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಮ್ಮ ದೇಶದಲ್ಲಿ 40 ವಿವಿಧ ಉಗ್ರ ಸಂಘಟನೆಗಳು ಸಕ್ರಿಯವಾಗಿದೆ ಎಂಬ ಸತ್ಯವನ್ನು ಒಪ್ಪಿಕೊಂಡಿದ್ದಾರೆ.ಪಾಕಿಸ್ತಾನ ಕಾಂಗ್ರೆಸ್‍ ನ ಅಧ್ಯಕ್ಷೆ ಶೀಲಾ ಜಾಕ್ಸನ್ ವಾಷಿಂಗ್ಟನ್‍ ನ ಕ್ಯಾಪಿಟಲ್ ಹಿಲ್‍ ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಸೆ.11ರಂದು ನ್ಯೂಯಾಕ್ ಮತ್ತು ವಾಷಿಂಗ್ಟನ್ ಮೇಲೆ ನಡೆದ ಭಯೋತ್ಪಾದಕರ ದಾಳಿಗೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ.ಇದು ಅಫ್ಘಾನಿಸ್ತಾನದ ಅಲ್-ಖೈದಾ ಉಗ್ರರ ಕೃತ್ಯ. ಪಾಕಿಸ್ತಾನದಲ್ಲಿ ತಾಲಿಬಾನ್ ಉಗ್ರಗಾಮಿಗಳು ಇಲ್ಲ. ಆದರೆ ನಾವು ಅಮೆರಿಕಾದ ಹೋರಾಟದ ಭಾಗವಾದೆವು. ದುರದೃಷ್ಟವಶಾತ್ ಎಲ್ಲವೂ ತಪ್ಪಾಗಿ ಹೋದಾಗ, ತಳ ಮಟ್ಟದ ಸತ್ಯವನ್ನು ನಾವು ಅಮೆರಿಕಾಗೆ ಹೇಳಿರಲಿಲ್ಲ  ಎಂದು ಹೇಳಿದ್ದಾರೆ.


ಹಾಗೇ ಪಾಕಿಸ್ತಾನದ ಸರಕಾರಗಳಿಗೆ ಅವುಗಳ ಮೇಲೆ ಹಿಡಿತವಿರಲಿಲ್ಲ. 40 ವಿವಿಧ ಉಗ್ರ ಸಂಘಟನೆಗಳು ಪಾಕಿಸ್ತಾನದಲ್ಲಿ ಕಾರ್ಯಾಚರಿಸುತ್ತಿದ್ದವು. ಇದರಿಂದ ಬಚಾವ್ ಆಗಬಹುದೇ ಎಂದು ನಮ್ಮಂತಹ ಜನರು ಕಳವಳ ಹೊಂದಿದ್ದೆವು. ನಮ್ಮಿಂದ ಇನ್ನಷ್ಟು ಹೆಚ್ಚಿನದನ್ನು ಅಮೆರಿಕಾ ನಿರೀಕ್ಷಿಸುತ್ತಿದ್ದಾಗ ಪಾಕಿಸ್ತಾನ ಆಗ ತನ್ನದೇ ಅಸ್ತಿತ್ವಕ್ಕಾಗಿ ಹೋರಾಡುತ್ತಿತ್ತು' ಎಂದು ಸತ್ಯ ಹೇಳದೇ ಇರದಿರುವುದರ ಹಿಂದಿನ ಕಾರಣವೆನೆಂಬುದನ್ನು ಅವರು ಬಿಚ್ಚಿಟ್ಟಿದ್ದಾರೆ. 
 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಗ್ರಾಹಕರನ್ನು ಆಕರ್ಷಿಸಲು ನೆಟ್‌ ಫ್ಲಿಕ್ಸ್ ಸಂಸ್ಥೆಯಿಂದ ಹೊಸ ಪ್ಲಾನ್ ಬಿಡುಗಡೆ