Publish Date: Sat, 06 Jul 2019 (09:29 IST)
Updated Date: Sat, 06 Jul 2019 (09:31 IST)
ಲಂಡನ್: ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನದ ಬಳಿಕ ವ್ಯಾಪಕ ಟೀಕೆಗೊಳಗಾಗಿದ್ದ ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್ ಏಕದಿನ ಕ್ರಿಕೆಟ್ ಗೂ ನಿವೃತ್ತಿ ಘೋಷಿಷಿದ್ದಾರೆ.
ಮಲಿಕ್ 2016 ರಲ್ಲಿಯೇ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಹೇಳಿದ್ದರು. ಈಗ ಏಕದಿನಕ್ಕೂ ಗುಡ್ ಬೈ ಹೇಳಿದ್ದಾರೆ. ಈ ಬಗ್ಗೆ ಪತ್ನಿ, ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪ್ರತಿಕ್ರಿಯೆ ನೀಡಿದ್ದಾರೆ.
ಎಲ್ಲಾ ಕತೆಗೂ ಒಂದು ಅಂತ್ಯವಿರುತ್ತದೆ. ಆದರೆ ಜೀವನದಲ್ಲಿ ಎಲ್ಲಾ ಅಂತ್ಯಕ್ಕೂ ಒಂದು ಆರಂಭವಿರುತ್ತದೆ. ನೀವು ವೃತ್ತಿ ಜೀವನದಲ್ಲಿ ಏನು ಸಾಧಿಸಿದ್ದೀರೋ ಅದರ ಬಗ್ಗೆ ನನಗೆ ಮತ್ತು ಇಝಾನ್ ಗೆ ಹೆಮ್ಮೆಯಿದೆ. ನಿಮ್ಮ ದೇಶಕ್ಕಾಗಿ 20 ವರ್ಷ ಆಡಿದ್ದೀರಿ. ಇದು ಸಾಧನೆಯೇ ಸರಿ’ ಎಂದು ಸಾನಿಯಾ ವಿಶ್ ಮಾಡಿದ್ದಾರೆ.