ಇಸ್ಲಾಮಾಬಾದ್: ಪ್ರವಾಹದ ನೀರನ್ನು ವೇಸ್ಟ್ ಮಾಡಬೇಡಿ. ಇದನ್ನು ಬಕೆಟ್ ನಲ್ಲಿ ತುಂಬಿಸಿಡಿ.. ಹೀಗಂತ ಪಾಕಿಸ್ತಾನದ ಸಚಿವ ಖ್ವಾಜಾ ಆಸಿಫ್ ಭಯಂಕರ ಐಡಿಯಾವೊಂದನ್ನು ಜನರಿಗೆ ನೀಡಿದ್ದಾರೆ. ಅವರ ಐಡಿಯಾಕ್ಕೆ ನೊಬೈಲ್ ಫ್ರೈಸೇ ಕೊಡ್ಬೇಕು.
ಪಾಕಿಸ್ತಾನದಲ್ಲಿ ಈಗ ಪ್ರವಾಹ ಮಿತಿ ಮೀರಿದ್ದು, ಸಾಕಷ್ಟು ಆಸ್ತಿ ಪಾಸ್ತಿ ನಷ್ಟವಾಗಿದೆ. ಮನೆಗಳು ಮುಳುಗಿ ಹೋಗಿವೆ. ಪಂಜಾಬ್ ಪ್ರಾಂತ್ಯದಲ್ಲಿ 100 ಕ್ಕೂ ಹೆಚ್ಚು ಮನೆಗಳು ಮುಳುಗಡೆಯಾಗಿವೆ. 20 ಲಕ್ಷಕ್ಕೂ ಹೆಚ್ಚು ಜನ ಸಂಕಷ್ಟದಲ್ಲಿದ್ದಾರೆ.
ಇಂತಹ ಸಂದರ್ಭದಲ್ಲಿ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಬೇಜವಬ್ಧಾರಿಯುತ ಹೇಳಿಕೆ ನೀಡಿದ್ದಾರೆ. ಪ್ರವಾಹದ ನೀರನ್ನು ಬಕೆಟ್ ಗಳಲ್ಲಿ ತುಂಬಿಸಿಡಿ. ಪ್ರವಾಹ ಬಂತೆಂದು ದೂರುವ ಬದಲು ಪ್ರವಾಹವನ್ನು ವರ ಎಂದು ತಿಳಿದುಕೊಳ್ಳಬೇಕು ಎಂದಿದ್ದಾರೆ. ಅಲ್ಲಾಹ್ ನೇ ಪ್ರವಾಹವನ್ನು ನಮಗಾಗಿ ನೀಡಿದ್ದಾನೆ ಎಂದುಕೊಳ್ಳಬೇಕು ಎಂದಿದ್ದಾರೆ.
ಅವರ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್ ಆಗುತ್ತಿದೆ. ಪಾಕಿಸ್ತಾನ ಯಾಕೆ ಇನ್ನೂ ಹಿಂದುಳಿದಿದೆ ಎನ್ನುವುದಕ್ಕೆ ಇದೇ ಸಾಕ್ಷಿ. ಯಪ್ಪಾ ಈತನ ತಲೆಗೆ ಏನನ್ನಬೇಕೋ ಎನ್ನುತ್ತಿದ್ದಾರೆ ನೆಟ್ಟಿಗರು.