ಇಸ್ಲಾಮಾಬಾದ್: ಪ್ರವಾಹದ ನೀರು ಆಶೀರ್ವಾದ ಇದ್ದ ಹಾಗೇ. ಅದನ್ನು ತಮ್ಮ ತಮ್ಮ ಮನೆಯಲ್ಲಿ ಶೇಖರಿಸಿಡಿ. ಮಳೆಯನ್ನು ಆಶೀರ್ವಾದ ಎಂದು ಪರಿಗಣಿಸಿ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖಾವಾಜ್ ಆಸಿಫ್ ಸಲಹೆಯನ್ನು ನೀಡಿದ್ದಾರೆ.
ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಪಾಕಿಸ್ತಾನದ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ವಿಚಿತ್ರ ಪರಿಹಾರವನ್ನು ನೀಡಿರುವುದು ಇದೀಗ ಸುದ್ದಿಗೆ ಕಾರಣವಾಗಿದೆ.
ತಗ್ಗು ಪ್ರದೇಶಗಳಲ್ಲಿ ವಾಸಿಸುವ ಪಾಕಿಸ್ತಾನಿಗಳು ಪ್ರವಾಹದ ನೀರನ್ನು ಚರಂಡಿಗಳಿಗೆ ಹೋಗಲು ಬಿಡುವ ಬದಲು ಕಂಟೈನರ್‌ಗಳಲ್ಲಿ ಶೇಖರಿಸಿಡಿ. ಆ ನೀರನ್ನು ದೇವರ ಆಶೀರ್ವಾದ ಎಂದು ಭಾವಿಸಿ ಎಂದಿದ್ದಾರೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಾದ್ಯಂತ ಸುರಿದ ಭಾರೀ ಮಳೆಗೆ ಭಾರೀ ಪ್ರವಾಹ ಉಂಟಾಗಿ, ಸಾವಿರಕ್ಕೂ ಅಧಿಕ ಹಳ್ಳಿಗಳಿಗೆ ಹಾನಿಯಾಗಿದೆ.
ಪಾಕಿಸ್ತಾನದ ದುನ್ಯಾ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಆಸಿಫ್, "ಪ್ರವಾಹದಂತಹ ಪರಿಸ್ಥಿತಿಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಜನರು ಪ್ರವಾಹದ ನೀರನ್ನು ಮನೆಗೆ ತೆಗೆದುಕೊಂಡು ಹೋಗಬೇಕು" ಎಂದು ಹೇಳಿದರು.
"ಜನರು ಈ ನೀರನ್ನು ತಮ್ಮ ಮನೆಗಳಲ್ಲಿ, ಟಬ್‌ಗಳಲ್ಲಿ ಮತ್ತು ಪಾತ್ರೆಗಳಲ್ಲಿ ಸಂಗ್ರಹಿಸಬೇಕು. ನಾವು ಈ ನೀರನ್ನು ಆಶೀರ್ವಾದದ ರೂಪದಲ್ಲಿ ನೋಡಬೇಕು ಮತ್ತು ಆದ್ದರಿಂದ ಅದನ್ನು ಸಂಗ್ರಹಿಸಬೇಕು" ಎಂದು ಅವರು ಹೇಳಿದರು.