Select Your Language

Notifications

webdunia
webdunia
webdunia
webdunia

ಕದನ ವಿರಾಮಕ್ಕೆ ಒಪ್ಪಿದ ಪಾಕಿಸ್ತಾನ–ಅಫ್ಗಾನಿಸ್ತಾನ: ಮಧ್ಯಸ್ಥಿಕೆ ವಹಿಸಿದ್ದ ಕತಾರ್ ಹೇಳಿದ್ದೇನು

Afghanistan-Pakistan Conflict, Qatar Foreign Ministry, Afghan Cricketer Death

Sampriya

ಇಸ್ಲಾಮಾಬಾದ್ , ಭಾನುವಾರ, 19 ಅಕ್ಟೋಬರ್ 2025 (10:32 IST)
Photo Credit X
ಇಸ್ಲಾಮಾಬಾದ್: ಒಂದು ವಾರಗಳ ಘರ್ಷಣೆಯ ಬಳಿಕ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಈ ಕುರಿತು ಭಾನುವಾರ ಕತಾರ್ ವಿದೇಶಾಂಗ ಸಚಿವಾಲಯ ಘೋಷಣೆ ಮಾಡಿವೆ.

ಎರಡು ರಾಷ್ಟ್ರಗಳ ನಡುವೆ ನಡೆದ ಸಂಘರ್ಷದಲ್ಲಿ ಹಲವು ಮಂದಿ ಮೃತಪಟ್ಟಿದ್ದರು. ಅದರಲ್ಲೂ ಅಫ್ಘಾನಿಸ್ತಾನದ ಯುವ ಕ್ರಿಕಿಟಿಗರು ಸಾವನ್ನಪ್ಪಿದ್ದು, ವಿಶ್ವದಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. 

ಉಭಯ ರಾಷ್ಟ್ರಗಳ ನಡುವಿನ ಸಂಘರ್ಷವನ್ನು ಶಮನಗೊಳಿಸಲು ಕತಾರ್ ಹಾಗೂ ಟರ್ಕಿ ಮಧ್ಯಸ್ಥಿಕೆ ವಹಿಸಿವೆ. ಅದರಂತೆ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಿಯೋಗಗಳು ದೋಹಾಕ್ಕೆ ಭೇಟಿ ನೀಡಿದ್ದವು. ಉಭಯ ರಾಷ್ಟ್ರಗಳ ರಕ್ಷಣಾ ಸಚಿವರು ದೋಹಾಗೆ ಭೇಟಿ ನೀಡಿದ್ದವು. ಮಾತುಕತೆ ಬಳಿಕ ಇದೀಗ ತಕ್ಷಣದ ಕದನ ವಿರಾಮಕ್ಕೆ ಒಪ್ಪಿಗೆ ನೀಡಿದೆ.

ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ ರಾಷ್ಟ್ರಗಳು ಶಾಶ್ವತ ಶಾಂತಿ ಮತ್ತು ಸ್ಥಿರತೆಯನ್ನು ಕ್ರೋಢೀಕರಿಸಲು ಕಾರ್ಯವಿಧಾನಗಳನ್ನು ಸ್ಥಾಪಿಸಲು ಹಾಗೂ ಕದನ ವಿರಾಮದ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಮುಂದಿನ ದಿನಗಳಲ್ಲಿ ಮಾತುಕತೆಗಳನ್ನು ನಡೆಸಲು ಒಪ್ಪಿಕೊಂಡಿವೆ ಎಂದು ಕತಾರ್ ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮುಂದಿನ ನಾಲ್ಕು ದಿನ ಮಳೆಯ ಅಬ್ಬರ: ಮೀನುಗಾರರಿಗೆ ವಾರ್ನಿಂಗ್‌