Select Your Language

Notifications

webdunia
webdunia
webdunia
webdunia

ಅಫಘಾನಿಸ್ತಾನದ ತಾಲಿಬಾನ್‌ನ ಪ್ರತೀಕಾರದ ದಾಳಿಗೆ ಪಾಕಿಸ್ತಾನದ 6 ಸೈನಿಕರು ಸಾವು

Taliban Pakistan War

Sampriya

ಇಸ್ಲಾಮಾಬಾದ್ , ಬುಧವಾರ, 15 ಅಕ್ಟೋಬರ್ 2025 (19:10 IST)
Photo Credit X
ಇಸ್ಲಾಮಾಬಾದ್: ಕಾಬೂಲ್ ಮೇಲೆ ವಾಯುದಾಳಿ ನಡೆಸಿರುವುದಕ್ಕೆ ಪ್ರತಿಯಾಗಿ ತಾಲಿಬಾನ್‌ ಪಾಕ್ ಮೇಲೆ ನಡೆಯಿರುವ ದಾಳಿಯಲ್ಲಿ ಆರು ಮಂದಿ ಪಾಕಿಸ್ತಾನ ಸೈನಿಕರು ಸಾವನ್ನಪ್ಪಿದ್ದಾರೆ. 

ಪಾಕಿಸ್ತಾನದ ಒರಾಕ್ ಜೈ ಜಿಲ್ಲೆಯ ಘಿಲ್ಜೊ ಪ್ರದೇಶದ ಬಳಿ ಅಫ್ಘಾನ್ ನ ತಾಲಿಬಾನ್ ಪಡೆಗಳು ಮಹಾಮೂದ್ ಜೈ ಪೋಸ್ಟ್‌ಗೆ ನುಗ್ಗಿ ಭೀಕರ ಸಂಘರ್ಷ ನಡೆಸಿದ್ದು, ಸುಮಾರು ಆರು ಮಂದಿ ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ.

ಇನ್ನೂ ಈ ದಾಳಿಯಿಂದಾಗಿ ಚಮನ್-ಸ್ಪಿನ್ ಬೋಲ್ಡಕ್ ಗಡಿಯಲ್ಲಿ ಪಾಕಿಸ್ತಾನದ ಹಲವು ಕೇಂದ್ರ ಸ್ಥಾನಗಳು, ಸಂವಹನ ವ್ಯವಸ್ಥೆಗಳಿಗೆ ಅಪಾರ ಹಾನಿಯಾಗಿವೆ ಎನ್ನಲಾಗಿದೆ.

ಈ ಸಂಬಂಧ ಪ್ರತಿಕ್ರಿಯಿಸಿದ ಪಾಕ್ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್, ತಾಲಿಬಾನ್ ಕಾರ್ಯಾಚರಣೆಗಳ ಪ್ರಮಾಣ ಮತ್ತು ಸಮಯವನ್ನು ನಿಖರವಾಗಿ ಗುರುತಿಸುವಲ್ಲಿ ವಿಫಲವಾಗಿರುವುದಾಗಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರನ್ನು ಟೀಕಿಸುತ್ತಿರುವವರು 25ವರ್ಷಗಳ ಹಿಂದೆ ಎಲ್ಲಿದ್ದರು