Select Your Language

Notifications

webdunia
webdunia
webdunia
webdunia

ಸುಂದರ್ ಪಿಚೈಗೆ ಪದ್ಮಭೂಷಣ ಪ್ರಶಸ್ತಿ ಹಸ್ತಾಂತರ

ಸುಂದರ್ ಪಿಚೈಗೆ ಪದ್ಮಭೂಷಣ ಪ್ರಶಸ್ತಿ ಹಸ್ತಾಂತರ
ವಾಷಿಂಗ್ಟನ್ , ಶನಿವಾರ, 3 ಡಿಸೆಂಬರ್ 2022 (12:05 IST)
ವಾಷಿಂಗ್ಟನ್ : ವ್ಯಾಪಾರ ಮತ್ತು ಕೈಗಾರಿಕಾ ವಿಭಾಗದಲ್ಲಿ ಗೂಗಲ್ ಹಾಗೂ ಆಲ್ಫಾಬೆಟ್ ಸಿಇಒ ಆಗಿರುವ ಸುಂದರ್ ಪಿಚೈ ಅವರಿಗೆ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

ಪ್ರಶಸ್ತಿಯನ್ನು ಪಿಚೈ ಅವರಿಗೆ ಭಾರತದ ಅಮೆರಿಕ ರಾಯಭಾರಿ ಹಸ್ತಾಂತರಿಸಿದ್ದಾರೆ. ಅಮೆರಿಕ-ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧು ಶುಕ್ರವಾರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಪಿಚೈ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಪ್ರಶಸ್ತಿ ಹಸ್ತಾಂತರಿಸಿದರು.

ತಮಿಳುನಾಡಿನ ಮದುರೈ ಮೂಲದ ಪಿಚೈ ಈ ವರ್ಷಾರಂಭದಲ್ಲಿ 17 ಪ್ರಶಸ್ತಿ ಪುರಸ್ಕೃತರಲ್ಲಿ ಒಬ್ಬರಾಗಿದ್ದರು.  ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಪಿಚೈ, ಈ ಅಪಾರ ಗೌರವಕ್ಕಾಗಿ ನಾನು ಭಾರತದ ಜನರಿಗೆ ಕೃತಜ್ಞನಾಗಿದ್ದೇನೆ.


Share this Story:

Follow Webdunia kannada

ಮುಂದಿನ ಸುದ್ದಿ

ಚಿಕ್ಕವಯಸ್ಸಿಗೆ ಮದುವೆ ಮಾಡುವಂತೆ ಹಿಂದೂಗಳಿಗೆ ಬದ್ರುದ್ದೀನ್ ಸಲಹೆ