Publish Date: Thu, 20 Oct 2022 (11:24 IST)
Updated Date: Thu, 20 Oct 2022 (12:06 IST)
ಭೋಪಾಲ್ : ಯುವತಿಯೊಬ್ಬಳ ಸ್ನೇಹ ಬೆಳೆಸಿ ಬೆಂಗಳೂರಿನಲ್ಲಿ ಗೂಗಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಟೆಕ್ಕಿಯೊಬ್ಬರು ಫಜೀತಿಗೆ ಸಿಲುಕಿದ ವಿಲಕ್ಷಣ ಘಟನೆಯೊಂದು ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.
ಮಧ್ಯಪ್ರದೇಶದ ಭೋಪಾಲ್ ಮೂಲದ ಗಣೇಶ್ ಶಂಕರ್ ಅವರು ಗೂಗಲ್ ಇಂಡಿಯಾದ ಮ್ಯಾನೇಜರ್ ಆಗಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಶಿಲ್ಲಾಂಗ್ನ ಐಐಎಂನಲ್ಲಿ ಎಂಬಿಎ ಓದುವಾಗ ಇವರಿಗೆ ಭೋಪಾಲ್ನ ಸುಜತಾ ಎಂಬ ಯುವತಿ ಜೊತೆ ಸ್ನೇಹ ಹುಟ್ಟಿಕೊಂಡಿದೆ. ಕ್ರಮೇಣ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರೂ 5 ವರ್ಷ ಪರಸ್ಪರ ಪ್ರೀತಿಸುತ್ತಿದ್ದರು.
ಇತ್ತೀಚೆಗೆ ಯುವತಿಯನ್ನು ಭೇಟಿಯಾಗಲೆಂದು ಗಣೇಶ್ ಭೋಪಾಲ್ಗೆ ತೆರಳಿದಾಗ ಅವರಿಗೆ ಅಚ್ಚರಿಯೊಂದು ಕಾದಿತ್ತು. ಒಂದೆರಡು ದಿನ ಯುವತಿ ಮನೆಯವರು ಗಣೇಶ್ನನ್ನು ಚೆನ್ನಾಗಿಯೇ ನೋಡಿಕೊಂಡರು.
ಬಳಿಕ ಅವರಿಗೆ ಮತ್ತು ಬರುವ ಔಷಧಿ ನೀಡಿ ಕತ್ತಲು ಕೋಣೆಯೊಂದರಲ್ಲಿ ಕೂಡಿ ಹಾಕಿದರು. ಅಲ್ಲದೆ ಈ ವೇಳೆ ಬೆದರಿಸಿ ಬಲವಂತವಾಗಿ ಯುವತಿ ಜೊತೆ ಮದುವೆ ಮಾಡಿಸಿ ಫೋಟೋ ಕೂಡ ತೆಗೆದಿದ್ದಾರೆ.