Select Your Language

Notifications

webdunia
webdunia
webdunia
webdunia

ಭಾರತದಲ್ಲೇ ಪಿಕ್ಸೆಲ್ ಫೋನ್ ತಯಾರಿಸಲು ಮುಂದಾದ ಗೂಗಲ್

ಭಾರತದಲ್ಲೇ ಪಿಕ್ಸೆಲ್ ಫೋನ್ ತಯಾರಿಸಲು ಮುಂದಾದ ಗೂಗಲ್
ವಾಷಿಂಗ್ಟನ್ , ಬುಧವಾರ, 14 ಸೆಪ್ಟಂಬರ್ 2022 (10:50 IST)
ವಾಷಿಂಗ್ಟನ್ : ಆಪಲ್ ಬಳಿಕ ಇದೀಗ ಗೂಗಲ್ ಕೂಡಾ ತನ್ನ ಕೆಲವು ಪಿಕ್ಸೆಲ್ ಫೋನ್ಗಳನ್ನು ಭಾರತದಲ್ಲಿ ತಯಾರಿಸಲು ಯೋಜಿಸುತ್ತಿದೆ.

ಗೂಗಲ್ ಭಾರತದಲ್ಲಿಯೇ ಸುಮಾರು 5 ಲಕ್ಷದಿಂದ 10 ಲಕ್ಷದವರೆಗೆ ಪಿಕ್ಸೆಲ್ ಫೋನ್ಗಳನ್ನು ತಯಾರಿಸುವ ಬಗ್ಗೆ ಯೋಜನೆ ರೂಪಿಸಿರುವುದಾಗಿ ವರದಿಯಾಗಿದೆ.

ಜಾಗತಿಕ ಬೇಡಿಕೆ, ಪೂರೈಕೆಯ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳನ್ನು ಉಲ್ಲೇಖಿಸಿ ಗೂಗಲ್ ಕಳೆದ 3 ವರ್ಷಗಳಿಂದ ಭಾರತದಲ್ಲಿ ತನ್ನ ಪ್ರಮುಖ ಫೋನ್ಗಳನ್ನು ಬಿಡುಗಡೆ ಮಾಡಿರಲಿಲ್ಲ.

ಇದೀಗ ಗೂಗಲ್ ತನ್ನ ಫೋನ್ಗಳನ್ನು ಭಾರತದಲ್ಲಿಯೇ ತಯಾರಿಸಲು ಯೋಜಿಸಿದ್ದು, ಇದು ಕಾರ್ಯಗತವಾಯಿತು ಎಂದಾದರೆ ಭಾರತ ವಿಧಿಸುವ ಶೇ.20 ರಷ್ಟು ಆಮದು ಸುಂಕವನ್ನು ಉಳಿತಾಯ ಮಾಡಬಹುದಾಗಿದೆ.

ಗೂಗಲ್ ಈ ಹಿಂದೆ ಪಿಕ್ಸೆಲ್ ಫೋನ್ಗಳನ್ನು ಚೀನಾದಲ್ಲಿ ತಯಾರಿಸಲು ಪ್ರಾರಂಭಿಸಿತ್ತು. 2019ರಲ್ಲಿ ಅಮೆರಿಕ ಹಾಗೂ ಚೀನಾ ನಡುವೆ ವ್ಯಾಪಾರದ ಉದ್ವಿಗ್ನತೆ ಉಂಟಾಗಿ, ತನ್ನ ತಯಾರಿಕಾ ಸ್ಥಳವನ್ನು ವಿಯೆಟ್ನಾಂಗೆ ಬದಲಾಯಿಸಲು ನಿರ್ಧರಿಸಿತ್ತು. ಆದರೂ ಕೋವಿಡ್ ಪ್ರಭಾವದಿಂದಾಗಿ ಪಿಕ್ಸೆಲ್ನ 6ನೇ ಸರಣಿಯನ್ನು ಚೀನಾದಲ್ಲಿಯೇ ತಯಾರಿಸಬೇಕಾಯಿತು. 


Share this Story:

Follow Webdunia kannada

ಮುಂದಿನ ಸುದ್ದಿ

ಇನ್ಮುಂದೆ ಟೋಲ್‌ಗಳಲ್ಲಿ ವಾಹನ ನಿಲ್ಲಿಸುವಂತಿಲ್ಲ!