Publish Date: Wed, 06 Jul 2022 (14:30 IST)
Updated Date: Wed, 06 Jul 2022 (14:33 IST)
ಫೆಮಿನಾ ಮಿಸ್ ಇಂಡಿಯಾ 2022ರ ಕಿರೀಟ ಧರಿಸಿದ ಸಿನಿ ಶೆಟ್ಟಿ ಕರ್ನಾಟಕ ಮೂಲದವರು ಎಂದು ಗೊತ್ತಾಗುತ್ತಿದ್ದಂತೆಯೇ ಗೂಗಲ್ನಲ್ಲಿ ಅತೀ ಹೆಚ್ಚು ಸರ್ಚ್ ಆಗಿದ್ದಾರೆ. ಕರ್ನಾಟಕದ ಮೂಲದ ಸಿನಿ ಶೆಟ್ಟಿ ಭಾನುವಾರ ಫೆಮಿನಾ ಮಿಸ್ ಇಂಡಿಯಾ 2022ರ ಕಿರೀಟ ಧರಿಸುವ ಮೂಲಕ ರಾತ್ರೋರಾತ್ರಿ ಫೇಮಸ್ ಆಗಿದ್ದಾರೆ.ಯಾರು ಈ ಸಿನಿ ಶೆಟ್ಟಿ? ಯಾವ ಊರಿನವರು? ಎಂಬ ಹತ್ತಾರು ಪ್ರಶ್ನೆಗಳು ಹುಟ್ಟಿಕೊಂಡಿದ್ದು, ನೆಟಿಜನ್ಗಳು ಅವರ ಬಗ್ಗೆ ತಿಳಿದುಕೊಳ್ಳಲು ಆರಂಭಿಸಿದ್ರು.ಸಿನಿ ಶೆಟ್ಟಿಯ ಪೋಷಕರು ಮೂಲತ ಕರ್ನಾಟಕದ ಉಡುಪಿ ಜಿಲ್ಲೆಯವರು. ಆದರೆ, ಈ ತಾರೆ ಹುಟ್ಟಿ ಬೆಳೆದದ್ದು ಮಾತ್ರ ಮಹಾನಗರಿ ಮುಂಬೈನಲ್ಲಿ.ಇವರು ಮುಂಬೈನಲ್ಲಿ ಹುಟ್ಟಿ ಬೆಳೆದರೂ ಕೂಡಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು ಅನ್ನೋದು ಹೆಮ್ಮೆಯ ಸಂಗತಿ.