ಅಮೇರಿಕಾ : 2008ರಲ್ಲಿ ನಡೆದ ಮುಂಬೈ ದಾಳಿಯ ಸೂತ್ರದಾರ ಪಾಕಿಸ್ತಾನ ಮೂಲದ ಕೆನಡಿಯನ್ ವಾಣಿಜ್ಯೋದ್ಯಮಿ ತಹಾವುರ್ ರಾನಾನನ್ನು ಅಮೇರಿಕಾದಲ್ಲಿ ಬಂಧಿಸಲಾಗಿದೆ.
ಮುಂಬೈ ದಾಳಿ ನಡೆಯಲು ತಹಾವುರ್ ರಾನಾನ ಕೈವಾಡವಿದೆ. ಆದ್ದರಿಂದ ಆತನನ್ನು ದೇಶದಿಂದ ಗಡಿಪಾರು ಮಾಡುವಂತೆ ಭಾರತ ಅಮೇರಿಕಾಕ್ಕೆ ಮನವಿ ಮಾಡಿತ್ತು. ಈ ಮನವಿಯ ಮೇರೆಗೆ ಲಾಸ್ ಏಂಜಲೀಸ್ ನಲ್ಲಿ ರಾನಾನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ವಾದ ವಿವಾದಗಳನ್ನು ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಜೂನ್ 30ಕ್ಕೆ ಮುಂದೂಡಿದ್ದಾರೆ ಎನ್ನಲಾಗಿದೆ.