ಕಠ್ಮಂಡು: ನೇಪಾಳದಲ್ಲಿ ಯುವ ಸಮೂಹದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಇಡೀ ದೇಶವೇ ಹೊತ್ತಿ ಉರಿಯುತ್ತಿದೆ. ಪ್ರಧಾನಿ ಕೆಪಿ ಶರ್ಮಾ ಓಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ನೇಪಾಳದ ಹೊಸ ಪ್ರಧಾನಿ ರೇಸ್ ನಲ್ಲಿ ಕರ್ನಾಟಕದಲ್ಲಿ ಎಂಟೆಕ್ ಪದವಿ ಪಡೆದ ರಾಪರ್ ಬಲೇನ್ ಶಾ ಹೆಸರು ಕೇಳಿಬರುತ್ತಿದೆ.
ಜೆನ್ ಜಿ ತಲೆಮಾರಿನ ಜನರ ದಂಗೆಯಿಂದಾಗಿ ನೇಪಾಳದಲ್ಲಿ ಪ್ರಧಾನಿ, ಅಧ್ಯಕ್ಷರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು ಅರಾಜಕತೆ ಸೃಷ್ಟಿಯಾಗಿದೆ. ಈ ನಡುವೆ ಹೊಸ ಸರ್ಕಾರ ರಚನೆ ಸರ್ಕಸ್ ನಡೆಯುತ್ತಿದೆ. ಪ್ರಧಾನಿ ಹುದ್ದೆಗೆ ಹಲವರ ಹೆಸರು ಕೇಳಿಬರುತ್ತಿದ್ದು ಕರ್ನಾಟಕ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯದಲ್ಲಿ ಎಂಟೆಕ್ ಪದವಿ ಪಡೆದ ಬಲೇನ್ ಶಾ ಹೆಸರು ಕೇಳಿಬರುತ್ತಿದೆ.
ಯುವಜನರ ಆಶೋತ್ತರಗಳನ್ನು ಪೂರೈಸಲು ಬಲೇನ್ ಶಾ ಅವರೇ ಸೂಕ್ತ ವ್ಯಕ್ತಿ ಎಂದು ಒತ್ತಾಯ ಕೇಳಿಬರುತ್ತಿದೆ. ಯುವ ಜನರ ಬೆಂಬಲವೂ ಅವರಿಗಿದೆ. ಹೀಗಾಗಿ ಅವರೇ ನೂತನ ಪ್ರಧಾನಿಯಾದರೂ ಅಚ್ಚರಿಯಿಲ್ಲ.
ಮೂಲತಃ ಅವರು ನೇಪಾಳಿಯರೇ. ಅಲ್ಲಿಯೇ ಎಂಜಿನಿಯರಿಂಗ್ ಪದವಿ ಮುಗಿಸಿ ಕರ್ನಾಟಕಕ್ಕೆ ಎಂಟೆಕ್ ಪದವಿ ಪಡೆಯಲು ಬಂದಿದ್ದರು. ನೇಪಾಳದಲ್ಲಿ ಸಾಹಿತಿಯಾಗಿ, ರಾಪರ್ ಆಗಿ ಖ್ಯಾತಿ ಪಡೆದಿದ್ದರು. ಮೇಯರ್ ಚುನಾವಣೆಗೆ ಸ್ಪರ್ಧಿಸಿ ಗೆದ್ದವರು.