Publish Date: Tue, 11 Oct 2022 (13:27 IST)
Updated Date: Tue, 11 Oct 2022 (13:29 IST)
ಕೈವ್ : ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕನಸಿನ ಕ್ರಿಮಿಯಾ ಸಂಪರ್ಕಿಸುವ ಕ್ರಚ್ ಸೇತುವೆಯನ್ನು ಉಕ್ರೇನ್ ಧ್ವಂಸಗೊಳಿಸಿದ ಬಳಿಕ ಆಕ್ರೋಶಗೊಂಡ ರಷ್ಯಾ , ಉಕ್ರೇನ್ ವಿರುದ್ಧ ಸಮರ ಸಾರಿದೆ.
ಸೋಮವಾರದಿಂದ ಸತತವಾಗಿ ಉಕ್ರೇನ್ ಮೇಲೆ ಭೀಕರ ದಾಳಿ ನಡೆಸಿದೆ. ಸೋಮವಾರ 75 ಮಿಸೆಲ್ ಹಾಗೂ 5 ಡೆಡ್ಲಿ ರಾಕೆಟ್ಗಳಿಂದ ಅಗ್ನಿಮಳೆಗರೆದಿದ್ದ ರಷ್ಯಾ ಇಂದೂ ತನ್ನ ದಾಳಿಯನ್ನೂ ಮುಂದುವರಿಸಿದೆ.
ಬೆಳ್ಳಂಬೆಳಗ್ಗೆ ಉಕ್ರೇನ್ ರಾಜಧಾನಿ ಕೀವ್ ಮೇಲೆ ನಡೆಸಿದ ದಾಳಿಯಲ್ಲಿ 14 ಮಂದಿ ದುರ್ಮರಣಕ್ಕೀಡಾಗಿದ್ದು, ಹತ್ತಾರು ಮಂದಿ ಗಾಯಗೊಂಡಿದ್ದಾರೆ. ಆದರೆ ಉಕ್ರೇನ್ ತನ್ನ ಮೇಲೆ ರಷ್ಯಾ 84 ಕ್ರೂಸ್ ಮಿಸೆಲ್ಗಳಿಂದ ದಾಳಿ ನಡೆಸಿದೆ ಎಂದು ಹೇಳಿದೆ.
ಜೂನ್ ತಿಂಗಳ ಅಂತ್ಯದ ಬಳಿಕ ನಡೆದ ಮೊದಲ ಭೀಕರ ದಾಳಿ ಇದಾಗಿದೆ ಎಂಬುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.