Select Your Language

Notifications

webdunia
webdunia
webdunia
webdunia

ಉಕ್ರೇನ್ನಲ್ಲಿನ ನಾಗರಿಕರಿಗೆ ಭಾರತ ಸಲಹೆ ಏನು?

ಉಕ್ರೇನ್ನಲ್ಲಿನ ನಾಗರಿಕರಿಗೆ ಭಾರತ ಸಲಹೆ ಏನು?
ನವದೆಹಲಿ , ಮಂಗಳವಾರ, 11 ಅಕ್ಟೋಬರ್ 2022 (07:23 IST)
ನವದೆಹಲಿ : ಉಕ್ರೇನ್ನಲ್ಲಿ ಹೆಚ್ಚುತ್ತಿರುವ ಘರ್ಷಣೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತ  ಸೋಮವಾರ ಉಕ್ರೇನ್ಗೆ ತೆರಳುವ ಹಾಗೂ ಉಕ್ರೇನ್ನಲ್ಲಿ ಇರುವ ತನ್ನ ನಾಗರಿಕರಿಗೆ ಅನಿವಾರ್ಯವಲ್ಲದ ಎಲ್ಲಾ ರೀತಿಯ ಪ್ರಯಾಣವನ್ನು ತಪ್ಪಿಸುವಂತೆ ಸಲಹೆ ನೀಡಿದೆ.

ಕೀವ್ ಸೇರಿದಂತೆ ಉಕ್ರೇನ್ನ ಹಲವು ಪ್ರಮುಖ ನಗರಗಳಲ್ಲಿ ರಷ್ಯಾ ಇಂದು ಭೀಕರವಾಗಿ ದಾಳಿ ನಡೆಸಿದೆ. ಇಂದು ಉಕ್ರೇನ್ನಾದ್ಯಂತ ನಡೆದ ದಾಳಿಗಳಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ. 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಹಿನ್ನೆಲೆ ಭಾರತ ತನ್ನ ನಾಗರಿಕರಿಗೆ ಅನಗತ್ಯ ಪ್ರಯಾಣವನ್ನು ತಪ್ಪಿಸುವಂತೆ ಕೇಳಿಕೊಂಡಿದೆ.

ಉಕ್ರೇನ್ನಲ್ಲಿ ಪ್ರಸ್ತುತ ಉಲ್ಬಣಗೊಳ್ಳುತ್ತಿರುವ ಹಗೆತನದ ದೃಷ್ಟಿಯಿಂದ, ಭಾರತೀಯ ಪ್ರಜೆಗಳು ಉಕ್ರೇನ್ಗೆ ಹಾಗೂ ಯುದ್ಧಪೀಡಿತ ದೇಶದೊಳಗೆ ಅನಿವಾರ್ಯವಲ್ಲದ ಎಲ್ಲಾ ರೀತಿಯ ಪ್ರಯಾಣವನ್ನು ತಪ್ಪಿಸಿ.

ಉಕ್ರೇನ್ ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳು ನೀಡಿರುವ ಸುರಕ್ಷತೆ ಮತ್ತು ಭದ್ರತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಎಂದು ಕೀವ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಲಹೆ ನೀಡಿದೆ. 


Share this Story:

Follow Webdunia kannada

ಮುಂದಿನ ಸುದ್ದಿ

ಹಿಂದಿ ಹೇರಿಕೆ ವಿರೋಧಿಸಿ ಅಕ್ಟೋಬರ್ 15 ರಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಧರಣಿ