Publish Date: Mon, 10 Oct 2022 (16:21 IST)
Updated Date: Mon, 10 Oct 2022 (17:05 IST)
ಭಾರತ ಜೊಡೋ ಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿಗೆ ಕಾಂಗ್ರೆಸ್ ಪಕ್ಷವನ್ನು ಪುನರುಜ್ಜೀವಗೊಳಿಸಿಸುವ ಚಿಂತೆ. ಸಿದ್ದರಾಮಯ್ಯಗೆ ಎರಡನೇ ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗುವ ಚಿಂತೆಯಾದರೆ, ಡಿಕೆ ಶಿವಕುಮಾರ್ ಒಮ್ಮೆ ಆ ಹಾಟ್ ಸೀಟ್ ಮೇಲೆ ಕೂರುವ ಚಿಂತೆ. ಕಾಂಗ್ರೆಸ್ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ರಾಹುಲ್ ರನ್ನು ಇಂಪ್ರೆಸ್ ಮಾಡುವ ಚಿಂತೆ. ಹಾಗೆಯೇ, ಚಿತ್ರದುರ್ಗ ಜಿಲ್ಲೆಯ ಮೂಲಕ ಹಾದು ಹೋಗುತ್ತಿರುವ ಭಾರತ ಜೋಡೊ ಯಾತ್ರೆಯಲ್ಲಿ ಭಾಗವಹಿಸಿರುವ ಈ ಯುವ ಪಿಕ್ಪಾಕೆಟ್ ಗೆ ತನ್ನ ಹೊಟ್ಟೆ ತುಂಬಿಸಿಕೊಳ್ಳುವ ಚಿಂತೆ. ತನ್ನ ಕೈಚಳಕ ತೋರುವಾಗಲೇ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.