Select Your Language

Notifications

webdunia
webdunia
webdunia
webdunia

Israel Attack Lebanon: ಇಸ್ರೇಲ್ ದಾಳಿಗೆ ಲೆಬನಾನ್‌ 50 ಮಕ್ಕಳು ಸೇರಿ 558 ಮಂದಿ ಸಾವು

Israel Attack Lebanon

Sampriya

ಇಸ್ರೇಲ್‌ , ಮಂಗಳವಾರ, 24 ಸೆಪ್ಟಂಬರ್ 2024 (19:24 IST)
Photo Courtesy X
ಇಸ್ರೇಲ್‌: ಲೆಬನಾನ್‌ನ ಮೇಲೆ ಸೋಮವಾರ (ಸೆಪ್ಟೆಂಬರ್ 23, 2024) ಇಸ್ರೇಲ್ ನಡೆಸಿದ ದಾಳಿಗೆ 94ಕ್ಕೂ ಅಧಿಕ ಮಹಿಳೆಯರು ಮತ್ತು 50 ಕ್ಕೂ ಅಧಿಕ ಮಕ್ಕಳು ಸೇರಿ 558ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು  ಲೆಬನಾನಿನ ಅಧಿಕಾರಿಗಳು ತಿಳಿಸಿದ್ದಾರೆ.

2006ರಿಂದ  ಇಸ್ರೇಲ್- ಹಿಜ್ಬುಲ್ಲಾ ಬಂಡುಕೋರರ ಮಧ್ಯೆ ಸಂಘರ್ಷ ನಡೆಯುತ್ತಲೇ ಇದೆ. ಇನ್ನೂ ಇಸ್ರೇಲ್ ತನ್ನ ದಾಳಿಗೂ ಮುನ್ನಾ ದಕ್ಷಿಣ ಮತ್ತು ಪೂರ್ವ ಲೆಬನಾನ್‌ನಲ್ಲಿರುವ ನಿವಾಸಿಗಳನ್ನು ಸ್ಥಳಾಂತರವಾಗುವಂತೆ ಹೇಳಿತ್ತು.

ಅಪಾರ ಸಂಖ್ಯೆಯಲ್ಲಿ ಲೆಬನಾನಿಯರು ದಕ್ಷಿಣಕ್ಕೆ ಪಲಾಯಾಣ ಮಾಡುತ್ತಿದ್ದಾರೆ.

ಇಸ್ರೇಲಿ ಮಿಲಿಟರಿ ಸೋಮವಾರ (ಸೆಪ್ಟೆಂಬರ್ 23, 2024) ಸುಮಾರುನ ಉಗ್ರರ 800 ಗುರಿಗಳನ್ನು ಹೊಡೆದಿದೆ ಎಂದು ಘೋಷಿಸಿತು. ಇಸ್ರೇಲಿ ಮಿಲಿಟರಿ ವಕ್ತಾರ ರಿಯರ್ ಅಡ್ಮ್ ಡೇನಿಯಲ್ ಹಗರಿ ಅವರು
ಕಣಿವೆಯ ನಿವಾಸಿಗಳು ಹೆಜ್ಬುಲ್ಲಾ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವ ಪ್ರದೇಶಗಳನ್ನು ತಕ್ಷಣವೇ ಸ್ಥಳಾಂತರಿಸಬೇಕು ಎಂದು ಹೇಳಿದರು.

ರಾಕೆಟ್ ಸೈರನ್‌ಗಳು ಉತ್ತರ ಇಸ್ರೇಲ್‌ನ ಹೈಫಾ, ಅಫುಲಾ, ನಜರೆತ್ ಮತ್ತು ಇತರ ನಗರಗಳಲ್ಲಿ ರಾತ್ರಿಯಿಡೀ ರಾಕೆಟ್‌ಗಳ ಸುರಿಮಳೆಯನ್ನು ಹಿಜ್ಬುಲ್ಲಾ ಉಡಾಯಿಸಿದವು, ಇರಾನ್ ಬೆಂಬಲಿತ ಗುಂಪು ದಾಳಿಗಳು ಹಲವಾರು ಇಸ್ರೇಲಿ ಮಿಲಿಟರಿ ನೆಲೆಗಳು ಮತ್ತು ವಾಯುನೆಲೆಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ರಾಜೀನಾಮೆ ಒತ್ತಾಯಿಸಲ್ಲ ಎಂದ ಕುಮಾರಸ್ವಾಮಿ ಮಾತಿನ ಮರ್ಮವೇನು