Select Your Language

Notifications

webdunia
webdunia
webdunia
webdunia

ಹೆಲಿಕಾಪ್ಟರ್ ಪತನವಾಗಿ ದುರ್ಮರಣಕ್ಕೀಡಾದ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ

Ebrahim Raisi

Krishnaveni K

ಇರಾನ್ , ಸೋಮವಾರ, 20 ಮೇ 2024 (11:02 IST)
ಇರಾನ್: ಹೆಲಿಕಾಪ್ಟರ್ ಪತನವಾದ ಕಾರಣ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ದುರ್ಮರಣಕ್ಕೀಡಾದ ಘಟನೆ ನಡೆದಿದೆ. ಭಾನುವಾರ ಪತನಗೊಂಡಿದ್ದ ಹೆಲಿಕಾಪ್ಟರ್ ನಲ್ಲಿ ಇಬ್ರಾಹಿಂ ರೈಸಿ ಮತ್ತು ಇತರರು ಸಾವನ್ನಪ್ಪಿರುವುದಾಗಿ ಇರಾನ್ ಮಾಧ್ಯಮಗಳು ವರದಿ ಮಾಡಿವೆ.

ಅಧ್ಯಕ್ಷ ಇಬ್ರಾಹಿಂ ರೈಸಿ ಜೊತೆಗೆ ಸಚಿವ ಹುಸೇನ್ ಅಮೀರ್, ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದ ಗವರ್ನರ್ ಮಾಲೆಕ್ ರಹಮತಿ, ತಬ್ರಿಜನ್ ಇಮಾಮ್ ಮೊಹಮ್ಮದ್ ಅಲಿ, ಪೈಲೆಟ್, ಕೋ ಪೈಲೆಟ್, ಇತರೆ ಸಿಬ್ಬಂದಿಗಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ರೈಸಿ ಇದ್ದ ಹೆಲಿಕಾಪ್ಟರ್ ಜೊತೆಗಿದ್ದ ಎರಡು ಹೆಲಿಕಾಪ್ಟರ್ ಸುರಕ್ಷಿತವಾಗಿ ಮರಳಿದೆ. ಈ ಹೆಲಿಕಾಪ್ಟರ್ ಗಳಲ್ಲಿ ಇರಾನ್ ಇಂಧನ ಸಚಿವ ಅಲಿ ಅಕ್ಬರ್, ವಸತಿ ಸಚಿವ ಮೆಹ್ರದಾದ್ ಇದ್ದರು ಎನ್ನಲಾಗಿದೆ. ಆದರೆ ಅಧ್ಯಕ್ಷ ರೈಸಿ ಇದ್ದ ಹೆಲಿಕಾಪ್ಟರ್ ಪತನಗೊಂಡಿತ್ತು. ತಕ್ಷಣವೇ ಅಧ್ಯಕ್ಷರು ಹಾಗೂ ಇತರೆ ಸಿಬ್ಬಂದಿಗಳ ಪತ್ತೆಗಾಗಿ ಹುಡುಕಾಟ ನಡೆಸಲಾಗಿತ್ತು.

ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸಿ ಹೆಲಿಕಾಪ್ಟರ್ ನ ಅವಶೇಷಗಳನ್ನು ಪತ್ತೆ ಹೆಚ್ಚಿದ್ದವು. ಈ ವೇಳೆ ಯಾರೂ ಜೀವಂತವಾಗಿರುವ ಸಾಧ‍್ಯತೆಯಿಲ್ಲ ಎನ್ನಲಾಗಿತ್ತು. ಇದೀಗ ಇಬ್ರಾಹಿಂ ರೈಸಿ ಸಾವನ್ನಪ್ಪಿರುವ ಸುದ್ದಿ ಕೇಳಿಬರುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ ಹವಾಮಾನ: ಇಂದು ಯಾವ್ಯಾವ ಜಿಲ್ಲೆಗಳಲ್ಲಿ ಮಳೆಯಿರಲಿದೆ ಡೀಟೈಲ್ಸ್ ಇಲ್ಲಿದೆ