Publish Date: Wed, 29 May 2019 (06:50 IST)
Updated Date: Wed, 29 May 2019 (06:56 IST)
ಅಮೇರಿಕಾ : ನೀರಿನಿಂದ ವಿದ್ಯುತ್ ತಯಾರಿಸುವ ವಿಚಾರ ಎಲ್ಲರಿಗೂ ತಿಳಿದಿದೆ. ಆದರೆ ಇದೀಗ ಭಾರತದ ಯುವಕನೊಬ್ಬ ಬೆವರಿನಿಂದ ವಿದ್ಯುತ್ ತಯಾರಿಸುವ ವಿಧಾನವನ್ನು ಕಂಡುಹಿಡಿದಿದ್ದಾನೆ.
ಹೌದು. ಅಮೆರಿಕಾದಲ್ಲಿರುವ ಭಾರತದ ಸಂಜಾತ ರೋಹಿತ್ ನೇಮಣಿ ಎನ್ನುವ ಬಾಲಕ ಸ್ವೇಟರ್ ಒಂದನ್ನು ಕಂಡುಹಿಡಿದಿದ್ದು ಅದು ಬೆವರಿನಿಂದ ವಿದ್ಯುತ್ ತಯಾರಿಸುತ್ತದೆಯಂತೆ. ಬೆವರಿನಲ್ಲಿರುವ ಲವಣಾಂಶಗಳಲ್ಲಿ ಸಣ್ಣ ಸಣ್ಣ ವಿದ್ಯುತ್ ತರಂಗಗಳಿದ್ದು ಅದರಿಂದ ಈ ಸ್ವೇಟರ್ ವಿದ್ಯುತ್ ಉತ್ಪಾದಿಸುತ್ತದೆಯಂತೆ.
ಅಷ್ಟೇ ಅಲ್ಲದೇ ಬೆವರನ್ನು ಒಣಗುವ ಹಾಗೆ ಮಾಡಿ ದೇಹವನ್ನು ತಂಪಾಗಿರುವಂತೆ ಮಾಡುತ್ತದೆಯಂತೆ. ಆದರೆ ಈ ಅನ್ವೇಷಣೆ ಇನ್ನೂ ತಯಾರಿ ಹಂತದಲ್ಲಿದೆಯಂತೆ.