ಜಮ್ಮು ಕಾಶ್ಮೀರ: ಭಾರತ ನಿರಂತರವಾಗಿ ದಾಳಿ ಮಾಡುತ್ತಿದ್ದರೆ ಇತ್ತ ದೇಶ ರಕ್ಷಿಸುವ ಬದಲು ಹೇಳಿಕೆ ನೀಡುವುದರಲ್ಲೇ ಮಗ್ನರಾಗಿರುವ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ರನ್ನು ಜನರೇ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ ಭಾಷಣ ಯಾರಿಗೆ ಬೇಕಾಗಿದೆ ಎಂದಿದ್ದಾರೆ.
ಭಾರತ ಆಪರೇಷನ್ ಸಿಂಧೂರ್ ನಡೆಸಿದ ಬೆನ್ನಲ್ಲೇ ಪಾಕ್ ಪ್ರಧಾನಿ ನಮ್ಮ ಪ್ರತೀ ರಕ್ತದ ಹನಿಗೂ ಪ್ರತೀಕಾರ ಸ್ವೀಕರಿಸುತ್ತೇವೆ ಎಂದು ಭಾಷಣ ಬಿಗಿದಿದ್ದರು. ಆದರೆ ಭಾರತದ ಕ್ಷಿಪಣಿ ದಾಳಿಗಳನ್ನು ತಡೆಯುವಲ್ಲಿ ಪಾಕಿಸ್ತಾನ ಸಂಪೂರ್ಣ ವಿಫಲವಾಗಿದೆ.
ಆದರೆ ಇತ್ತ ಭಾರತ ಶತ್ರುದೇಶದ ಒಂದೇ ಒಂದು ಕ್ಷಿಪಣಿ ತನಗೆ ತಾಕದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದೇ ಕಾರಣಕ್ಕೆ ಈಗ ಪಾಕಿಸ್ತಾನಿಯರು ಪ್ರಧಾನಿ ಮತ್ತು ದೇಶದ ಸೈನಿಕರ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪ್ರಧಾನಿಯ ಭಾಷಣಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಜನ ದುರ್ಬಲ ಮತ್ತು ಆತ್ಮವಿಶ್ವಾಸದ ಕೊರತೆ ಎದ್ದು ಕಾಣುತ್ತಿದೆ ಎಂದಿದ್ದಾರೆ. ಕೇವಲ ಮಾತುಗಳಲ್ಲಿ ದೇಶಭಕ್ತಿಯನ್ನು ತೋರಿಸಿದರೆ ಸಾಲದು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.