Select Your Language

Notifications

webdunia
webdunia
webdunia
webdunia

ಪತ್ನಿಯ ರುಂಡ ಕತ್ತರಿಸಿ ಬೀದಿಯಲ್ಲಿ ಪ್ರದರ್ಶಿಸಿದ ಪತಿ..!

ಪತ್ನಿಯ ರುಂಡ ಕತ್ತರಿಸಿ ಬೀದಿಯಲ್ಲಿ ಪ್ರದರ್ಶಿಸಿದ ಪತಿ..!
ಇರಾನ್ , ಬುಧವಾರ, 9 ಫೆಬ್ರವರಿ 2022 (11:07 IST)
ಇರಾನ್: ವ್ಯಕ್ತಿಯೊಬ್ಬ ತನ್ನ ಪತ್ನಿಯ ತಲೆಯನ್ನು ಕತ್ತರಿಸಿ ಬಳಿಕ ಆ ತಲೆಯನ್ನು ಬೀದಿಯಲ್ಲಿ ಪ್ರದರ್ಶಿಸಿ ಬೆಚ್ಚಿಬೀಳಿಸುವಂತೆ ಮಾಡಿದ ಘಟನೆ ಇರಾನ್ ನಲ್ಲಿ ನಡೆದಿದೆ.
 
ಇರಾನ್‍ನ ನೈರುತ್ಯ ಭಾಗದ ನಗರ ಅಹ್ವಾಜ್ ಎಂಬಲ್ಲಿ ಈ ಘಟನೆ ನಡೆದಿದೆ. ಮೃತಳನ್ನು ಮೋನಾ ಹೈದರಿ (17) ಎಂದು ಗುರುತಿಸಲಾಗಿದೆ. ಪತಿಯೇ ಮೋನಾಳನ್ನು ಬರ್ಬರವಾಗಿ ಹತ್ಯೆ ಮಾಡಿ ವಿಕೃತಿ ಮೆರೆದಿದ್ದಾನೆ.

ಈತನಿಗೆ ಸೋದರ ಮಾವನೂ ಸಾಥ್ ನೀಡಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ತನಗೆ ದ್ರೋಹ ಎಸಗಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶೀಲ ಶಂಕಿಸಿದ ವ್ಯಕ್ತಿ ತನ್ನ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಅಲ್ಲದೆ ಆಕೆಯ ಶಿರವನ್ನು ಕತ್ತರಿಸಿ ಬೀದಿಯಲ್ಲಿ ಹಿಡಿದು ಪ್ರದರ್ಶಿಸಿದ್ದಾನೆ. ಈ ಘಟನೆಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭವಾಯಿತು. 

ಇತ್ತ ವಿಡಿಯೋ ವೈರಲ್ ಆಗುತ್ತಿದ್ದಂತೆ ಇರಾನ್‍ನಲ್ಲಿ ತೀವ್ರ ಸಂಚಲನವೇ ಸೃಷ್ಟಿಯಾಗಿದೆ. ಮಹಿಳಾ ವ್ಯವಹಾರಗಳ ಉಪಾಧ್ಯಕ್ಷೆ ಎನ್ಸೀಹ್ ಖಜಾಲಿ ಅವರು ಸಂಸತ್ತಿನಲ್ಲಿ ಪ್ರಕರಣ ಸಂಬಂಧ ಶೀಘ್ರ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮತ್ತು ಇಂತಹ ಪ್ರಕರಣಗಳನ್ನು ತಡೆಯಲು ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಹೆಸರಾಂತ ಸ್ತ್ರೀವಾದಿ ಚಲನಚಿತ್ರ ನಿರ್ಮಾಪಕಿ ತಹ್ಮಿನೆ ಮಿಲಾನಿ ತಮ್ಮ ಇನ್‍ಸ್ಟಾ ಖಾತೆಯಲ್ಲಿ ಮೋನಾ ಅಜ್ಞಾನಕ್ಕೆ ಬಲಿಯಾಗಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ವೆಬ್ ಸೀರೀಸ್ ನಲ್ಲಿ ಅವಕಾಶ ಕೊಡುವುದಾಗಿ ಯುವತಿಗೆ ಕಿರುಕುಳ