Select Your Language

Notifications

webdunia
webdunia
webdunia
webdunia

ರೆಸ್ಟೋರೆಂಟ್‍ನಲ್ಲಿ ಬೆಂಕಿ ಅವಘಡ : 17 ಮಂದಿ ಸಜೀವ ದಹನ

ರೆಸ್ಟೋರೆಂಟ್‍ನಲ್ಲಿ ಬೆಂಕಿ ಅವಘಡ : 17 ಮಂದಿ ಸಜೀವ ದಹನ
ಬೀಜಿಂಗ್ , ಗುರುವಾರ, 29 ಸೆಪ್ಟಂಬರ್ 2022 (09:18 IST)
ಬೀಜಿಂಗ್ : ರೆಸ್ಟೋರೆಂಟ್ನಲ್ಲಿ ಬೆಂಕಿ ಕಾಣಿಸಿಕೊಂಡು 17 ಜನರು ಸಜೀವ ದಹನರಾದ ಘಟನೆ ಈಶಾನ್ಯ ಚೀನಾದಲ್ಲಿ ನಡೆದಿದೆ.
 
ಚಾಂಗ್ಚುನ್ ನಗರದ ರೆಸ್ಟೋರೆಂಟ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ರೆಸ್ಟೋರೆಂಟ್ನಲ್ಲಿದ್ದ 17 ಮಂದಿ ಸಜೀವ ದಹನವಾಗಿದ್ದು, ಮೂವರಿಗೆ ಗಂಭೀರ ಗಾಯವಾಗಿದೆ.

ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದವರು ಧಾವಿಸಿ ಬೆಂಕಿ ನಂದಿಸಿ, ರೆಸ್ಟೋರೆಂಟ್ನಲ್ಲಿದ್ದ ಜನರನ್ನು ರಕ್ಷಿಸಿದ್ದಾರೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಘಟನೆಗೆ ಸಂಬಂಧಿಸಿ ತನಿಖೆ ನಡೆಯುತ್ತಿದೆ. ಚೀನಾದಲ್ಲಿ ಆಗಾಗ ಬೆಂಕಿ ಅನಾಹುತಗಳು ಸಂಭವಿಸುತ್ತಿರುತ್ತವೆ.


Share this Story:

Follow Webdunia kannada

ಮುಂದಿನ ಸುದ್ದಿ

RSSನ್ನೂ ಬ್ಯಾನ್ ಮಾಡಿ : ಕೇರಳ ವಿಪಕ್ಷಗಳ ಒತ್ತಾಯ