Select Your Language

Notifications

webdunia
webdunia
webdunia
webdunia

ಹೀಗೂ ಉಂಟೇ...ಕಳೆದ 12 ವರ್ಷಗಳಿಂದ ಪ್ರತಿನಿತ್ಯ ಈತ ನಿದ್ರಿಸಿದ್ದು ಬರೀ 30ನಿಮಿಷ

Daisuke Hori

Sampriya

ಜಪಾನ್ , ಮಂಗಳವಾರ, 3 ಸೆಪ್ಟಂಬರ್ 2024 (18:35 IST)
Photo Courtesy X
ಜಪಾನ್: ಮನುಷ್ಯನೊಬ್ಬ ಆರೋಗ್ಯವಂತನಾಗಿರಬೇಕೆಂದರೆ ದೇಹಕ್ಕೆ ಸುಮಾರು 6-8 ಗಂಟೆಗಳ ನಿದ್ರೆ ಅಗತ್ಯವಿರುತ್ತದೆ. ಒಂದು ವೇಳೆ ನಮ್ಮ ದೇಹಕ್ಕೆ ಇಂತಿಷ್ಟು ನಿದ್ದೆ ಬೀಳದಿದ್ದರೆ ದೇಹದ ಮೇಲೆ  ಋಣಾತ್ಮಕ ಪರಿಣಾಮ ಬೀರಿ,  ದೈನಂದಿನ ಕಾರ್ಯನಿರ್ವಹಣೆಯನ್ನು ಕಷ್ಟಕರವಾಗಿಸುತ್ತದೆ.

ಸತತವಾಗಿ 6-8 ಗಂಟೆಗಳ ನಿದ್ದೆ ಮಾಡುವುದರಿಂದ ಮನಸ್ಥಿತಿ, ಅರಿವಿನ ಕಾರ್ಯ ಮತ್ತು ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.  ಆದರೆ ಇಲ್ಲೊಬ್ಬ ವ್ಯಕ್ತಿ ಕಳೆದ 12 ವರ್ಷಗಳಿಂದ ದಿನಕ್ಕೆ ಕೇವಲ 30 ನಿಮಿಷಗಳ ಕಾಲ ಮಾತ್ರ ನಿದ್ರೆ ಮಾಡುತ್ತಾನೆ. ಇದು ನಂಬಲು ಅಸಾಧ್ಯ ಎನಿಸಿದರು, ಇದು ನಿಜ.

ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದಂತೆ, ಡೈಸುಕೆ ಹೋರಿ ಎಂಬ ಜಪಾನಿನ ವ್ಯಕ್ತಿ ತನ್ನ ಜೀವನವನ್ನು "ಡಬಲ್" ಮಾಡುವ ಸಲುವಾಗಿ ಕಳೆದ 12 ವರ್ಷಗಳಿಂದ ದಿನಕ್ಕೆ ಕೇವಲ 30 ನಿಮಿಷಗಳ ಕಾಲ ಮಾತ್ರ ನಿದ್ರೆ ಮಾಡಿದ್ದಾನೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, "ನೀವು ತಿನ್ನುವ ಒಂದು ಗಂಟೆ ಮೊದಲು ನೀವು ವ್ಯಾಯಾಮ ಅಥವಾ ಕಾಫಿ ಕುಡಿಯುವವರೆಗೆ, ನೀವು ಅರೆನಿದ್ರಾವಸ್ಥೆಯನ್ನು ದೂರವಿಡಬಹುದು" ಎಂದು ಹೋರಿ ಹೇಳಿದ್ದಾರೆ.

ಹೋರಿ, ಒಬ್ಬ ವಾಣಿಜ್ಯೋದ್ಯಮಿ, ಆಕ್ಟೀವ್ ಆಗಿ ಇರಲು ದೀರ್ಘ ನಿದ್ರೆಗಿಂತ ಉತ್ತಮ ಗುಣಮಟ್ಟದ ನಿದ್ರೆ ಹೆಚ್ಚು ಮುಖ್ಯ ಎಂದು ನಂಬಿದ್ದಾನೆ.

ಅದಲ್ಲದೆ ಈತ "ತಮ್ಮ ಕೆಲಸದಲ್ಲಿ ನಿರಂತರ ಏಕಾಗ್ರತೆಯ ಅಗತ್ಯವಿರುವ ಜನರು ದೀರ್ಘ ನಿದ್ರೆಗಿಂತ ಉತ್ತಮ ಗುಣಮಟ್ಟದ ನಿದ್ರೆಯಿಂದ ಹೆಚ್ಚು ಪ್ರಯೋಜನ ಪಡೆಯುತ್ತಾರೆ ಎಂದು ಸಲಹೆ ನೀಡಿದ್ದಾನೆ.

ಇನ್ನೂ ಈತನನ್ನು ಪರೀಕ್ಷಿಸಲು ಜಪಾನ್‌ನ ಯೋಮಿಯುರಿ ಟಿವಿ ವಿಲ್ ಯು ಗೋ ವಿತ್ ಮಿ ಎಂಬ ರಿಯಾಲಿಟಿ ಶೋನಲ್ಲಿ  ಮೂರು ದಿನಗಳ ಕಾಲ ಆತನ ದಿನಚರಿಯನ್ನು ಗಮನಿಸಲಾಯಿತು. ಅಚ್ಚರಿ ಎಂಬಂತೆ ಆತ  ಕೇವಲ 26 ನಿಮಿಷಗಳ ಕಾಲ ಮಾತ್ರ ದಿನದಲ್ಲಿ ನಿದ್ರೆ ಮಾಡಿದ್ದಾರೆ. ಇನ್ನುಳಿದ ಸಂದರ್ಭದಲ್ಲಿ ,  ಉಪಹಾರ ಸೇವಿಸಿದ, ಕೆಲಸಕ್ಕೆ ಹೋದ ಮತ್ತು ಜಿಮ್‌ಗೆ ಹೋದ



Share this Story:

Follow Webdunia kannada

ಮುಂದಿನ ಸುದ್ದಿ

ಎಸಿಪಿ ಚಂದನ್‌ರಿಂದ ಲೈಂಗಿಕ ದೌರ್ಜನ್ಯ: ಠಾಣೆಯ ಸಿಸಿಟಿವಿ ದೃಶ್ಯ ನೀಡುವರೆಗೂ ಆಹೋರಾತ್ರಿ ಧರಣಿ