Select Your Language

Notifications

webdunia
webdunia
webdunia
webdunia

ರಷ್ಯಾ ಸೈನಿಕರ ಎಂಟ್ರಿ !

ನವದೆಹಲಿ , ಶುಕ್ರವಾರ, 25 ಫೆಬ್ರವರಿ 2022 (17:07 IST)
ಮಾಸ್ಕೋ : ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾ ಸಿಕ್ಕ ಸಿಕ್ಕಲ್ಲಿ ರಕ್ತಪಾತ ಆರಂಭಿಸಿದೆ.

ಉಕ್ರೇನ್ ಸೈನಿಕರ ಯೂನಿಫಾರ್ಮ್ ಧರಿಸಿ ರಷ್ಯಾದ ಮಿಲಿಟರಿ ಪಡೆ ಕೀವ್ನತ್ತ ಎಂಟ್ರಿ ಕೊಟ್ಟಿರುವ ಬಗ್ಗೆ ವರದಿಯಾಗಿದೆ.

ರಷ್ಯಾದ ಮಿಲಿಟರಿ ಪಡೆಯ ಸೈನಿಕರು ಉಕ್ರೇನ್ ಸೈನ್ಯವನ್ನು ಹೊಳುವ ಯೂನಿಫಾರ್ಮ್ ಧರಿಸಿ ರಷ್ಯಾದ ಕೀವ್ಗೆ ಅಕ್ರಮವಾಗಿ ಪ್ರವೇಶಿಸಿದ್ದಾರೆ. ತಕ್ಷಣ ಕಾರ್ಯಪ್ರವೃತರಾದ ಉಕ್ರೇನ್ ಮಿಲಿಟರಿ ಪಡೆ ಉಕ್ರೇನ್ ಸೈನಿಕರನ್ನು ವಶಕ್ಕೆ ಪಡೆದು ಮಿಲಿಟರಿ ವಾಹನವನ್ನು ವಶಕ್ಕೆ ಪಡೆದಿದೆ ಎಂದು ಉಕ್ರೇನ್ನ ಹಿರಿಯ ಮಿಲಿಟರಿ ಅಧಿಕಾರಿಯೊಬ್ಬರು ಸ್ಥಳೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಕ್ಷಣ ಕ್ಷಣಕ್ಕೂ ಉಕ್ರೇನ್ ಮೇಲೆ ರಷ್ಯಾ ದಾಳಿ ತೀವ್ರಗೊಳಿಸುತ್ತಿದ್ದು, ಸಿಕ್ಕ ಸಿಕ್ಕಲ್ಲಿ ಉಕ್ರೇನ್ ಯೋಧರ ಯೂನಿಫಾರ್ಮ್ ಧರಿಸಿ ರಷ್ಯಾ ಸೈನಿಕರು ಬರಲಾರಂಭಿಸಿದ್ದಾರೆ.

ಉಕ್ರೇನ್ನ ಕೀವ್ನತ್ತ ರಷ್ಯಾದ ಯುದ್ಧ ಬಂಕರ್ಗಳು ಸೇನಾ ವಾಹನದಲ್ಲಿ ಪ್ರವೇಶಿಸುತ್ತಿದ್ದು, ಉಕ್ರೇನ್ ಸೈನಿಕರು ಮತ್ತು ರಷ್ಯಾ ಸೈನಿಕರ ಮಧ್ಯೆ ಗುಂಡಿನ ದಾಳಿ ಕೂಡ ನಡೆಯುತ್ತಿದೆ.

ಈಗಾಗಲೇ ಉಕ್ರೇನ್ನ ಕಾಖೋವ್ಕಾದ ಜಲವಿದ್ಯುತ್ ಸ್ಥಾವರವನ್ನು ರಷ್ಯಾ ಸೇನೆ ವಶಕ್ಕೆ ಪಡೆದುಕೊಂಡು ರಷ್ಯಾ ಧ್ವಜವನ್ನು ಜಲವಿದ್ಯುತ್ ಸ್ಥಾವರದ ಮೇಲೆ ಹಾರಿಸಿದೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ತಿಂಗಳು ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಪುನರಾರಂಭ