Select Your Language

Notifications

webdunia
webdunia
webdunia
webdunia

ಆರ್ಥಿಕ ನೆರವು ನೀಡಲು ಸಿದ್ಧ ?

ಆರ್ಥಿಕ ನೆರವು ನೀಡಲು ಸಿದ್ಧ ?
ನವದೆಹಲಿ , ಶನಿವಾರ, 26 ಫೆಬ್ರವರಿ 2022 (12:22 IST)
ವಾಷಿಂಗ್ಟನ್ : ರಷ್ಯಾದ ಆಕ್ರಮಣಕ್ಕೆ ತುತ್ತಾಗಿರುವ ಉಕ್ರೇನ್ಗೆ ಅಗತ್ಯ ಆರ್ಥಿಕ ನೆರವು ನೀಡುವುದಾಗಿ ವಿಶ್ವ ಬ್ಯಾಂಕ್ ಭರವಸೆ ನೀಡಿದೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿರ್ಧಾರಕ್ಕೆ ಕಳವಳ ವ್ಯಕ್ತಪಡಿಸಿರುವ ವಿಶ್ವ ಬ್ಯಾಂಕ್, ನಾವು ಉಕ್ರೇನ್ಗೆ ತಕ್ಷಣದ ಬೆಂಬಲವನ್ನು ಒದಗಿಸಲು ಸಿದ್ಧರಿದ್ದೇವೆ. ಹಣಕಾಸು ಹಂಚಿಕೆ ಸೇರಿದಂತೆ ಇತರೆ ಬೆಂಬಲಕ್ಕಾಗಿ ಕ್ರಮಕೈಗೊಂಡಿದ್ದೇವೆ. ಇದಕ್ಕಾಗಿ ನಮ್ಮ ಎಲ್ಲಾ ಹಣಕಾಸು ಮತ್ತು ತಾಂತ್ರಿಕ ಬೆಂಬಲ ಸಾಧನಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದೆ. 

ವಿಶ್ವ ಬ್ಯಾಂಕ್ ಗ್ರೂಪ್ನ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಮಾತನಾಡಿ, ಉಕ್ರೇನ್ನಲ್ಲಿ ನಡೆಯುತ್ತಿರುವ ಘಟನೆಗಳ ಪರಿಣಾಮವಾಗಿ ಉಂಟಾಗಿರುವ ಹಿಂಸಾಚಾರ, ಜೀವಹಾನಿಯಿಂದ ವಿಶ್ವ ಬ್ಯಾಂಕ್ ಕಳವಳಗೊಂಡಿದೆ. ನಾವು ಉಕ್ರೇನ್ನ ದೀರ್ಘಕಾಲದ ಪಾಲುದಾರರಾಗಿದ್ದೇವೆ. ಇಂತಹ ನಿರ್ಣಾಯಕ ಕ್ಷಣದಲ್ಲಿ ದೇಶದ ಜನತೆಯ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.

 
ಮಾಲ್ಪಾಸ್ ಅವರು ಶಾನಿವಾರದಂದೇ ಮ್ಯೂನಿಚ್ನಲ್ಲಿ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿಯಾಗಿದ್ದರು. ಉಕ್ರೇನ್ ಪ್ರದೇಶದ ಜನರಿಗೆ ವಿಶ್ವ ಬ್ಯಾಂಕ್ನ ಬೆಂಬಲ ಮತ್ತು ಸಹಾಯ ಒದಗಿಸುವ ಕುರಿತು ಆಶಯ ವ್ಯಕ್ತಪಡಿಸಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ತೀವ್ರಗೊಂಡ ದಾಳಿ; ಸ್ಫೋಟ, ಬೆಂಕಿಯ ಜ್ವಾಲೆ!