Select Your Language

Notifications

webdunia
webdunia
webdunia
webdunia

`ಸೈಬರ್ ವಾರ್’ ಘೋಷಣೆ!

`ಸೈಬರ್ ವಾರ್’ ಘೋಷಣೆ!
ನವದೆಹಲಿ , ಶನಿವಾರ, 26 ಫೆಬ್ರವರಿ 2022 (12:01 IST)
ವಾಷಿಂಗ್ಟನ್ : ರಷ್ಯಾ ಉಕ್ರೇನ್ ವಿರುದ್ಧ ನಿನ್ನೆಯಿಂದ ದಾಳಿ ಮಾಡುತ್ತಿದೆ.

ಇದೇ ಸಂದರ್ಭದಲ್ಲಿ ರಷ್ಯಾ ಸರ್ಕಾರದ ವಿರುದ್ಧ ವಿಶ್ವದಾದ್ಯಂತ ಟೆಕ್ಕಿಗಳು `ಸೈಬರ್ ವಾರ್’ ಘೋಷಣೆ ಮಾಡಿದ್ದಾರೆ. ಅನಾನಿಮಸ್ ಹ್ಯಾಕಿಂಗ್ ಗ್ರೂಪ್, ರಷ್ಯಾ ಸರ್ಕಾರದ ವಿರುದ್ಧ ಸೈಬರ್ ವಾರ್ ಮಾಡುವುದಾಗಿ ನಿನ್ನೆ ರಾತ್ರಿ ಘೋಷಿಸಿದೆ.

ಬ್ರಿಟನ್ನಲ್ಲಿ ಪ್ರಸಾರವಾಗುವ ಕ್ರೆಮ್ಲಿನ್ ಬೆಂಬಲಿತ ಟಿವಿ ಚಾನೆಲ್ ಖಖಿ ವೆವ್ ಸೆಟ್ ಅನ್ನು ಹ್ಯಾಕ್ ಮಾಡಿದೆ. ಸಂಬಂಧಪಟ್ಟವರು ವೆವ್ ಸೆಟ್ ಪ್ರವೇಶಿಸಲು ಪ್ರಯತ್ನಿಸಿದಾಗ, ಇನ್ಆಕ್ಷೆಸಬಲ್ ಆಗಿದೆ. ಅಲ್ಲದೇ ವೆವ್ ಸೆಟ್ ಎರರ್ ಎಂದು ತೋರಿಸಿದೆ.

ಪುಟಿನ್ ಸರ್ಕಾರದ ವಿರುದ್ಧ ‘ಅನಾನಿಮಸ್’ ಸೈಬರ್ ವಾರ್ ಘೋಷಣೆ ಮಾಡಿದ್ದು, ರಷ್ಯಾದ ಪ್ರಚಾರ ಕೇಂದ್ರ ಖಖಿ ನ್ಯೂಸ್ ವೆವ್ ಸೆಟ್ ತೆಗೆದುಕೊಳ್ಳಲಾಗಿದೆ ಎಂದು ಬರೆದು ಟ್ವೀಟ್ ಮಾಡಲಾಗಿದೆ. ‘ಅನಾನಿಮಸ್’ ಈ ಹಿಂದೆ ಕು ಕ್ಲುಕ್ಸ್ ಕ್ಲಾನ್ ಮತ್ತು ಇಸ್ಲಾಮಿಕ್ ಉಗ್ರಗಾಮಿಗಳ ಗುಂಪಿಗೆ ಸೇರಿದವರನ್ನು ಗುರಿಯಾಗಿಸಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಜನರು ಈ ಕುರಿತು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ನೆಟ್ಟಿಗರೊಬ್ಬರು, ಥ್ಯಾಂಕ್ಸ್ `ಅನಾನಿಮಸ್’, ಅವರ ಹಣಕಾಸು ಬರಿದಾಗುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನೀವು ಅದ್ಭುತ, ಧನ್ಯವಾದಗಳು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಥ್ಯಾಂಕ್ಸ್, ಲವ್ ಯೂ, ಇದು ನಿಜವಾಗಿಯೂ ಖುಷಿಯಾದ ವಿಷಯ ಎಂದು ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ರಷ್ಯಾ ಮಾಧ್ಯಮಗಳಿಗೆ ಫೇಸ್​ಬುಕ್​​ನಿಂದ ನಿರ್ಬಂಧ!