Select Your Language

Notifications

webdunia
webdunia
webdunia
webdunia

ಪೊಲೀಸ್ ಅಧಿಕಾರಿಗೆ ಕಾಫಿ ಕೊಟ್ಟು ಕೆಲಸ ಕಳೆದುಕೊಂಡ ನೌಕರ. ಕಾರಣವೇನು ಗೊತ್ತಾ?

ಪೊಲೀಸ್ ಅಧಿಕಾರಿಗೆ ಕಾಫಿ ಕೊಟ್ಟು ಕೆಲಸ ಕಳೆದುಕೊಂಡ ನೌಕರ. ಕಾರಣವೇನು ಗೊತ್ತಾ?
ಅಮೇರಿಕಾ , ಮಂಗಳವಾರ, 3 ಡಿಸೆಂಬರ್ 2019 (06:23 IST)
ಅಮೇರಿಕಾ : ಪೊಲೀಸ್ ಅಧಿಕಾರಿಯೊಬ್ಬರಿಗೆ  ಸ್ಟಾರ್ ಬಕ್ಸ್  ಉದ್ಯೋಗಿಯೊಬ್ಬ ಕಾಫಿ ಕೊಟ್ಟು ತನ್ನ ಕೆಲಸ ಕಳೆದುಕೊಂಡ ಘಟನೆ ಅಮೇರಿಕಾದ ಒಕ್ಲಾಹಾಮಾದಲ್ಲಿ ನಡೆದಿದೆ.



ಪೊಲೀಸ್ ಅಧಿಕಾರಿ ಜಾನಿ ಒಮರಾ ಎಂಬುವವರು ಥ್ಯಾಂಕ್ಸ್ ಗಿವಿಂಗ್ ದಿನಕ್ಕೆಂದು ಒಕ್ಲಾಹಾಮಾದ ಗ್ಲೆನ್ ಪೂಲ್ ನ ಸ್ಟಾರ್ ಬಕ್ಸ್  ಔಟ್ ಲೆಟ್ ಗೆ ಬಂದು 5 ಕಾಫಿಗಳನ್ನು ಖರೀದಿ ಮಾಡಿದ್ದಾರೆ. ಆಗ ಅವರಿಗೆ ನೀಡಲಾದ ಕಪ್ ಗಳ ಮೇಲೆ ಇದ್ದ ಲೇಬಲ್ ಗಳ ಮೇಲೆ ‘PIG ‘ ಎಂದು ಮುದ್ರಿಸಲಾಗಿತ್ತು.


ಇದರಿಂದ ಕೋಪಗೊಂಡ ಪೊಲೀಸ್ ಅಧಿಕಾರಿ ಈ ಕಪ್ ಗಳ ಚಿತ್ರಗಳನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ವೈರಲ್ ಆದ ಹಿನ್ನಲೆಯಲ್ಲಿ ತಮ್ಮ ಪ್ರತಿಷ್ಠೆಗೆ ಧಕ್ಕೆಯಾಗುತ್ತದೆ ಎಂದು ಸ್ಟಾರ್ ಬಕ್ಸ್  ಆ ಕೆಲಸಗಾರನನ್ನು ಕೆಲಸದಿಂದ ವಜಾಗೊಳಿಸಿ ಪೊಲೀಸ್ ಅಧಿಕಾರಿಯ ಬಳಿ ಕ್ಷಮೆ ಕೇಳಿದೆ.

 
 

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಮಂತ ದೇವರಿಗೆ ಚಂಪಾ ಷಷ್ಠಿ ಮಹೋತ್ಸವ