ಉಗ್ರಗಾಮಿ ಬಾಗ್ದಾದಿ ಒಂದು ನಾಯಿಯಂತೆ ಸತ್ತಿದ್ದಾನೆ- ಡೊನಾಲ್ಡ್ ಟ್ರಂಪ್

ಸೋಮವಾರ, 28 ಅಕ್ಟೋಬರ್ 2019 (05:58 IST)
ವಾಷಿಂಗ್ಟನ್ : ಇಸ್ಲಾಮಿಕ್ ಸ್ಟೇಟ್  ಉಗ್ರಗಾಮಿ ಸಂಘಟನೆಯ ನಾಯಕ ಜಗತ್ತಿನ ನಂಬರ್ 1 ಉಗ್ರಗಾಮಿ  ಅಬುಬಕರ್  ಅಲ್ ಬಾಗ್ದಾದಿ ಸಾವನಪ್ಪಿರುವುದಾಗಿ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಅತ್ಯಂತ ಕ್ರೂರಿಯಾದ ಬಾಗ್ದಾದಿ ಅಮೇರಿಕಾ ಸೇನೆಯ ದಾಳಿಗೆ ಸಿಕ್ಕಿ ಒಂದು ನಾಯಿಯಂತೆ, ಹೇಡಿಯಂತೆ ಸತ್ತಿದ್ದಾನೆ ಎಂದು  ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಲ್ಲದೇ ಆತ ಅಮೇರಿಕಾದ ಸೇನೆಗೆ ಹೆದರಿ ಆತ್ಮಾಹುತಿ ಬಾಂಬ್ ಸ್ಫೋಟಿಸಿಕೊಂಡು ಸತ್ತಿದ್ದಾನೆ ಎಂದು ಅವರು ತಿಳಿಸಿದ್ದಾರೆ.


ಹಾಗೇ  ಅಬುಬಕರ್  ಅಲ್ ಬಾಗ್ದಾದಿಯ ಮೇಲೆ ದಾಳಿ ನಡೆಸಲು ಸಹಾಯ ಮಾಡಿದ ರಷ್ಯಾ, ಟರ್ಕಿ, ಸಿರಿಯಾ ಮತ್ತು ಇರಾಕ್ ರಾಷ್ಟ್ರಗಳಿಗೆ  ಟ್ರಂಪ್ ಧನ್ಯವಾದ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ದೀಪಾವಳಿಗೆ ಬಿಎಸ್ ಎನ್ ಎಲ್ ನಿಂದ ಗ್ರಾಹಕರಿಗೆ ಭರ್ಜರಿ ಆಫರ್