ವಾಷಿಂಗ್ಟನ್ : ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸುದ್ದಿವಾಹಿನಿಯೊಂದರ ಮಾಜಿ ನಿರೂಪಕಿಯನ್ನು ಕಿಸ್ ಮಾಡಲು ಆಫೀಸ್ ಗೆ ಕರೆದಿದ್ದಾರೆ ಎಂಬ ವಿಚಾರ ಇದೀಗ ಬಹಿರಂಗವಾಗಿದೆ.
ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷರಾಗುವ ಮೊದಲು ಫಾಕ್ಸ್ ಸುದ್ದಿವಾಹಿನಿಯ ಮಾಜಿ ನಿರೂಪಕಿ ಕರ್ಟನಿ ಫ್ರೈಲ್ ಅವರಿಗೆ ಫೋನ್ ಕಾಲ್ ಮಾಡಿ ನೀನು ಸಖತ್ ಹಾಟ್ ಆಗಿದ್ದೀಯಾ. ನನ್ನ ಕಚೇರಿಗೆ ಬಾ ಕಿಸ್ ಮಾಡೋಣ ಎಂದು ಕರೆದಿದ್ದಾರಂತೆ. ಇದನ್ನು ಆಕೆ ನಿರಾಕರಿಸಿದ್ದಾರಂತೆ.
ಈ ವಿಚಾರವನ್ನು ಅವರು ಬರೆದಿರುವ ‘ಟುನೈಟ್ ಅಟ್ 10:ಕಿಕ್ಕಿಂಗ್ ಬೂಜ್ ಆಯಂಡ್ ಬ್ರೇಕಿಂಗ್ ನ್ಯೂಸ್’ ಪುಸ್ತಕದಲ್ಲಿ ಉಲ್ಲೇಖಿಸುವುದರ ಮೂಲಕ ಬಹಿರಂಗಪಡಿಸಿದ್ದಾರೆ. ಈ ಪುಸ್ತಕ ಮುಂದಿನವಾರ ರಿಲೀಸ್ ಆಗಲಿದೆ ಎನ್ನಲಾಗಿದೆ.