Select Your Language

Notifications

webdunia
webdunia
webdunia
webdunia

ಭಾರತಕ್ಕೆ ಬಂಪರ್ ಆಫರ್ ನೀಡಲು ಮುಂದಾದ ಡೊನಾಲ್ಡ್ ಟ್ರಂಪ್

Trump-Modi

Krishnaveni K

ನ್ಯೂಯಾರ್ಕ್ , ಶುಕ್ರವಾರ, 27 ಜೂನ್ 2025 (09:55 IST)
ನ್ಯೂಯಾರ್ಕ್: ಶೀಘ್ರದಲ್ಲೇ ಭಾರತದ ಜೊತೆಗೆ ಬಹಳ ದೊಡ್ಡ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿದ್ದೇವೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಮೂಲಕ ಭಾರತಕ್ಕೆ ಬಿಗ್ ಆಫರ್ ಕೊಡಲು ಮುಂದಾಗಿದ್ದಾರೆ.

ಇತ್ತೀಚೆಗೆ ಪಾಕಿಸ್ತಾನದ ಸೇನಾ ನಾಯಕ ಆಸಿಫ್ ಮುನೀರ್ ಗೆ ಕರೆದು ಆತಿಥ್ಯ ನೀಡಿದ ಬಳಿಕ ಅಮೆರಿಕಾದ ಮೇಲೆ ಭಾರತಕ್ಕೆ ಕೊಂಚ ಅಸಮಾಧಾನ ಮೂಡಿತ್ತು. ಇದರ ಬೆನ್ನಲ್ಲೇ ಮೋದಿ ಆಹ್ವಾನವಿತ್ತರೂ ಅಮೆರಿಕಾಗೆ ಭೇಟಿ ನೀಡಿರಲಿಲ್ಲ. ಅದರ ಬೆನ್ನಲ್ಲೇ ಈಗ ಟ್ರಂಪ್ ದೊಡ್ಡ ವ್ಯಾಪಾರ ಒಪ್ಪಂದದ ಪ್ರಸ್ತಾಪವಿಟ್ಟಿರುವುದು ಗಮನಿಸಬೇಕಾದ ಅಂಶವಾಗಿದೆ.

ಕಳೆದ ನಾಲ್ಕು ದಿನಗಳಿಂದ ಭಾರತ ಮತ್ತು ಅಮೆರಿಕಾ ನಡುವೆ ವ್ಯಾಪಾರ ಒಪ್ಪಂದದ ಬಗ್ಗೆ  ಸುದೀರ್ಘ ಮಾತುಕತೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಟ್ರಂಪ್ ಶ್ವೇತಭವನದಲ್ಲಿ ಬಿಗ್ ಬ್ಯೂಟಿಫುಲ್ ಕಾರ್ಯಕ್ರಮದಲ್ಲಿ ವ್ಯಾಪಾರ ಒಪ್ಪಂದದ ಘೋಷಣೆ ಮಾಡಿದ್ದಾರೆ.

ಮೆಗಾ ವ್ಯಾಪಾರ ಒಪ್ಪಂದದ ಕುರಿತು ನಾಲ್ಕು ದಿನಗಳ ಮಾತುಕತೆ ವೇಳೆ ಕೈಗಾರಿಕೆ ಮತ್ತು ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವುದು, ಸುಂಕ ಕಡಿತಗೊಳಿಸುವುದು ಇತ್ಯಾದಿ ವಿಚಾರಗಳ ಬಗ್ಗೆ ಚರ್ಚೆಯಾಗಿದೆ. ಪ್ರಸ್ತುತ ಇರುವ 190 ಮಿಲಿಯನ್ ಡಾಲರ್ ವ್ಯಾಪಾರ ಒಪ್ಪಂದವನ್ನು 500 ಮಿಲಿಯನ್ ಡಾಲರ್ ಗೆ ವಿಸ್ತರಿಸುವ ಬಗ್ಗೆ ಚರ್ಚಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅಲ್ಲ, ಕೊನೆ ಕ್ಷಣದಲ್ಲಿ ಟ್ವಿಸ್ಟ್