Select Your Language

Notifications

webdunia
webdunia
webdunia
webdunia

ಕಲ್ಲಂಗಡಿ ಪಿಜ್ಜಾ ತಯಾರಿಸಿ ಪಿಜ್ಜಾ ಅಭಿಮಾನಿಗಳ ಟೀಕೆಗೆ ಗುರಿಯಾದ ಡಾಮಿನೋಸ್

ಕಲ್ಲಂಗಡಿ ಪಿಜ್ಜಾ ತಯಾರಿಸಿ ಪಿಜ್ಜಾ ಅಭಿಮಾನಿಗಳ ಟೀಕೆಗೆ ಗುರಿಯಾದ ಡಾಮಿನೋಸ್
ನವದೆಹಲಿ , ಸೋಮವಾರ, 23 ಆಗಸ್ಟ್ 2021 (13:50 IST)
Watermelon Pizza:ಡಾಮಿನೋಸ್ ಆಸ್ಟ್ರೇಲಿಯಾ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕಲ್ಲಂಗಡಿ ಪಿಜ್ಜಾದ ತಯಾರಿ ವಿಡಿಯೋವನ್ನು ಹಂಚಿಕೊಂಡಿದೆ ಪಿಜ್ಜಾ, ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಇಷ್ಟವಾಗುವ ತಿನಿಸಾಗಿದೆ. ಪಿಜ್ಜಾದಲ್ಲಿ ಹಲವಾರು ವೈವಿಧ್ಯತೆಗಳಿದ್ದು ಕಾರ್ನ್ನಿಂದ ಹಿಡಿದು ಟೊಮ್ಯಾಟೋ, ಈರುಳ್ಳಿ, ಚೀಸ್, ಚೀಸ್ ಬರ್ಸ್ಟ್, ವೆಜಿಟೇಬಲ್ ಪಿಜ್ಜಾ, ರೋಸ್ಟೆಡ್ ಪಿಜ್ಜಾ ಹೀಗೆ ಪಿಜ್ಜಾ ಅಭಿಮಾನಿಗಳಿಗೆ ಪಿಜ್ಜಾದ ಬಗೆ ಬಗೆಯ ಫ್ಲೇವರ್ಗಳು ಹಬ್ಬದೂಟವನ್ನೇ ಉಣಬಡಿಸುತ್ತದೆ.

ತರಕಾರಿ ಸರದಿ ಅಯ್ತು, ಪನ್ನೀರ್, ಚೀಸ್ ಸರದಿ ಆಯ್ತು. ಇನ್ನೀಗ ಪಿಜ್ಜಾದಲ್ಲಿ ನಿಮಗೆ ಹಣ್ಣುಗಳು ಕಾಣಸಿಗುವ ದಿನಗಳು ದೂರವಿಲ್ಲ. ಹೌದು ಡಾಮಿನೋಸ್ ಆಸ್ಟ್ರೇಲಿಯಾ ಕಲ್ಲಂಗಡಿ ಬಳಸಿ ಪಿಜ್ಜಾವನ್ನು ತಯಾರಿಸಿದ್ದು ಇದೊಂದು ವಿಭಿನ್ನ ರುಚಿಯ ಪಿಜ್ಜಾವಾಗಲಿದೆ ಎಂದು ಸಂಸ್ಥೆ ತಿಳಿಸಿದೆ. ಇನ್ಸ್ಟಾಗ್ರಾಮ್ ಬಳಕೆದಾರರಾದ ಓಲಿ ಪೀಟರ್ಸನ್ ಕಲ್ಲಂಗಡಿ ಪಿಜ್ಜಾದ ಮೂಲ ರೆಸಿಪಿಯನ್ನು ತಮ್ಮ ಪೇಜ್ನಲ್ಲಿ ಹಂಚಿಕೊಂಡಿದ್ದಾರೆ.
ಕಲ್ಲಂಗಡಿಯನ್ನು ಕೊರೆದು ಅದರ ಮೇಲೆ ಬಾರ್ಬೆಕ್ಯೂ ಸಾಸ್, ಚೀಸ್, ಪೇಪ್ರೊನಿ ಸ್ಲೈಸ್ಗಳಿಂದ ಟಾಪಿಂಗ್ ಮಾಡಿರುವ ವಿಡಿಯೋವನ್ನು ಓಲಿ ಹಂಚಿಕೊಂಡಿದ್ದಾರೆ. ಸಂಪೂರ್ಣ ವಿಶ್ವವೇ ಪಿಜ್ಜಾವನ್ನು ಬಹುಮೆಚ್ಚಿಕೊಂಡು ಸೇವಿಸುತ್ತಾರೆ. ಹೆಚ್ಚಿನ ಬಾಣಸಿಗರು ಪಿಜ್ಜಾದಲ್ಲಿ ಬೇರೆ ಬೇರೆ ಪಾಕ ವೈವಿಧ್ಯಗಳ ಪರೀಕ್ಷೆಯನ್ನು ಮಾಡಿದ್ದು ಪಿಜ್ಜಾ ಪ್ರೇಮಿಗಳು ಈ ಎಲ್ಲಾ ವೈವಿಧ್ಯತೆಗಳನ್ನು ಸ್ವಾಗತಿಸಿದ್ದಾರೆ. ಆದರೆ, ಈ ಕಲ್ಲಂಗಡಿ ಪಿಜ್ಜಾಕ್ಕೆ ಮಿಶ್ರ ಪ್ರತಿಕ್ರಿಯೆಗಳು ದೊರೆತಿದ್ದು ಹೆಚ್ಚಿನ ಪಿಜ್ಜಾ ಪ್ರೇಮಿಗಳಿಗೆ ಇದು ಅಷ್ಟೊಂದು ರುಚಿಸಲಿಲ್ಲ ಎಂಬುದಂತೂ ಪಕ್ಕಾ ಆಗಿದೆ.
ಹಣ್ಣಿನ ಪಿಜ್ಜಾ ತಯಾರಿಕೆಗಾಗಿ ಪೈನಾಪಲ್, ಕಿವಿ, ಸ್ಟ್ರಾಬೆರಿ, ಚಾಕೊಲೇಟ್ ಬಳಸಿ ಯಾವುದೇ ಕಸ್ಟಮೈಸೇಶನ್ ಅನ್ವೇಷಿಸಲಾಗಿಲ್ಲ. ಆದರೆ ಕಲ್ಲಂಗಡಿ ಬಳಸಿ ತಯಾರಿಸಿದ ಪಿಜ್ಜಾವನ್ನು ಜಾಗತಿಕವಾಗಿ ಪಿಜ್ಜಾ ಪ್ರಿಯರು ಸ್ವಾಗತಿಸಿಲ್ಲ ಎಂಬುದಂತೂ ನಿಜವಾಗಿದೆ. ಪಿಜ್ಜಾ ಪ್ರೇಮಿಗಳು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಡಾಮಿನೋಸ್ ಆಸ್ಟ್ರೇಲಿಯಾ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕಲ್ಲಂಗಡಿ ಪಿಜ್ಜಾದ ತಯಾರಿ ವಿಡಿಯೋವನ್ನು ಹಂಚಿಕೊಂಡಿದೆ. ನೀವು ಕಡಿಮೆ ಕಾರ್ಬ್ ಇರುವ ಪಿಜ್ಜಾ ಆಯ್ಕೆಗಾಗಿ ಕೇಳುತ್ತಿದ್ದಿರಿ. @elburritomonster (ಓಲಿ ಪೀಟರ್ಸನ್ ಇನ್ಸ್ಟಾ ಖಾತೆ) ಕಲ್ಲಂಗಡಿ ಪಿಜ್ಜಾವನ್ನು ತಯಾರಿಸಿದಾಗ ನಾವು ಕೂಡ ಇದೇ ರೀತಿ ಕಲ್ಲಂಗಡಿ ಪಿಜ್ಜಾ ತಯಾರಿಸಲು ಪ್ರಯತ್ನಿಸಿದೆವು. ನೀವು ಟ್ರೈ ಮಾಡಲು ಬಯಸುತ್ತೀರಾ? ಎಂಬ ಶೀರ್ಷಿಕೆ ಇರುವ ಕಲ್ಲಂಗಡಿ ಪಿಜ್ಜಾ ತಯಾರಿಯ ವಿಡಿಯೋ ಹಂಚಿಕೊಂಡಿದ್ದಾರೆ.
ಪಿಜ್ಜಾ ಅಭಿಮಾನಿಗಳು ಈ ವಿಡಿಯೋಗೆ ಬೇರೆ ಬೇರೆ ಪ್ರತಿಕ್ರಿಯೆಗಳನ್ನು ನೀಡಿದ್ದು ಇದೊಂದು ವಿಫಲ ಪ್ರಯತ್ನ ಎಂದೇ ಬರೆದುಕೊಂಡಿದ್ದಾರೆ. ‘ಇದು ಅನ್ಯಾಯ’ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರೆ ಇದು ಪೈನಾಪಲ್ನಷ್ಟು ಕೆಟ್ಟದಾಗಿರುವುದಿಲ್ಲ ಎಂಬುದು ನನ್ನ ಅಭಿಪ್ರಾಯ ಎಂದು ಇನ್ನೊಬ್ಬರು ತಿಳಿಸಿದ್ದಾರೆ.
ಹಾಗಾದರೆ ಕಲ್ಲಂಗಡಿಯ ಬದಲಿಗೆ ಮಾವಿನ ಹಣ್ಣು ಬಳಸಿ ಪಿಜ್ಜಾ ತಯಾರಿಸಿ ಎಂದು ಇನ್ನೊಬ್ಬರು ಬಳಕೆದಾರರು ಸಲಹೆ ನೀಡಿದ್ದಾರೆ. ದಯವಿಟ್ಟು ನಿಲ್ಲಿಸಿ. ಕಲ್ಲಂಗಡಿ ಪಿಜ್ಜಾ ಟ್ರೈ ಮಾಡಬೇಡಿ ಎಂದು ಇನ್ನೊಬ್ಬ ಬಳಕೆದಾರರು ಗೋಗರೆದಿದ್ದಾರೆ. ಇನ್ನು ಕೆಲವೊಂದು ಬಳಕೆದಾರರು ಧನಾತ್ಮಕ ಕಾಮೆಂಟ್ ನೀಡಿದ್ದು ಇದೊಂದು ವಿಭಿನ್ನ ಪ್ರಯತ್ನವಾಗಿದೆ, ನಿಜವಾಗಲೂ ನಾನು ಟ್ರೈ ಮಾಡಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ಚುನಾವಣೆಗೆ ಎಚ್ಡಿಕೆ ಮಾಸ್ಟರ್ ಪ್ಲಾನ್