Select Your Language

Notifications

webdunia
webdunia
webdunia
webdunia

ಬಿಗ್ ಬಿ ಬಚ್ಚನ್ ಮತ್ತೆ ಕಿರುತೆರೆಯಲ್ಲಿ; ಕೌನ್ ಬನೇಗಾ ಕರೋಡ್ಪತಿ ಸೀಜನ್ 13

ಬಿಗ್ ಬಿ ಬಚ್ಚನ್ ಮತ್ತೆ ಕಿರುತೆರೆಯಲ್ಲಿ; ಕೌನ್ ಬನೇಗಾ ಕರೋಡ್ಪತಿ ಸೀಜನ್ 13
ನವದೆಹಲಿ , ಭಾನುವಾರ, 22 ಆಗಸ್ಟ್ 2021 (13:08 IST)
ಪ್ರಸಕ್ತ ಋತುವಿನಲ್ಲಿ, ಪ್ರಸಿದ್ದ ಕಾರ್ಯಕ್ರಮವಾದ ಕೌನ್ ಬನೇಗಾ ಕರೋಡ್ಪತಿ ನಿರೂಪಕ ಮತ್ತು ಬಾಲಿವುಡ್ನ ಮೆಗಾಸ್ಟಾರ್, ಅಮಿತಾಬ್ ಬಚ್ಚನ್ ಮತ್ತು ಸಿದ್ಧಾರ್ಥ್ ಬಸು ಅವರು ಕಾರ್ಯಕ್ರಮದ ಅದ್ಭುತ ಪ್ರದರ್ಶನದ ಬಗ್ಗೆ ಮಾತನಾಡಿದ್ದಾರೆ.

ಈ ಕೌನ್ ಬನೇಗಾ ಕರೋಡ್ಪತಿ ಆವೃತ್ತಿಯಲ್ಲಿ ವೀಕ್ಷಕರು ಯಾವ ಹೊಸ ಅಂಶಗಳನ್ನು ನೋಡುತ್ತಾರೆ ಎನ್ನುವ ಕುತೂಹಲವನ್ನು ಕೂಡ ಪ್ರೇಕ್ಷಕರ ತಲೆಗೆ ಹುಳ ಬಿಡಲಾಗಿದೆ. ಕೋಟ್ಯಾಧಿಪತಿ 13 ಸೀಜನ್ನಲ್ಲಿ  ಅಮಿತಾಬ್ ಬಚ್ಚನ್ ಅವರ 21 ವರ್ಷಗಳ ವೈಭವದ ಪ್ರಯಾಣದಲ್ಲಿ ಅತ್ಯಂತ ಜನಪ್ರಿಯ ಗೇಮ್ ಶೋ ಹೇಗೆ ಅವರ ಜೀವನ ಬದಲಾಯಿಸಿತು ಎನ್ನುವುದನ್ನು ಇಲ್ಲಿ ಹಂಚಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ತಾಂತ್ರಿಕ ಬೆಳವಣಿಗೆಗಳು ಇಲ್ಲದಿದ್ದಾಗ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಇದನ್ನು ಪ್ರಾರಂಭಿಸಿದಾಗ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕೇವಲ 12 ವರ್ಷ ಮತ್ತು ಒಲಿಂಪಿಕ್ಸ್ ಚಿನ್ನದ ವಿಜೇತ ನೀರಜ್ ಚೋಪ್ರಾ,  ಕೇವಲ 3 ವರ್ಷದ ಹುಡುಗರು.
ತನ್ನ ಪ್ರೇಕ್ಷಕರಿಗೆ ಸಂಪೂರ್ಣವಾಗಿ ವಿಭಿನ್ನ ನೋಟ ಮತ್ತು ಭಾವನೆಯನ್ನು ನೀಡುತ್ತಾ ಬೆಳೆದ ಈ ಕಾರ್ಯಕ್ರಮ ಈಗ ಖ್ಯಾತಿಯ ಉತ್ತುಂಗಕ್ಕೆ ಬಂದು ನಿಂತಿದೆ. ಕೌನ್ ಬನೇಗಾ ಕರೋಡ್ಪತಿ 13 ರ ಸೆಟ್ನಲ್ಲಿ ಎಲ್ಇಡಿ ಮತ್ತು ರಿಯಾಲಿಟಿಗೆ ಹತ್ತಿರವಾದ ಅಂಶಗಳುಳ್ಳ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದೆ, ಈ ಕಾರ್ಯಕ್ರಮದ ವೈಭವವನ್ನು ಹಾಗೂ ಅನುಭೂತಿಯನ್ನು ಉನ್ನತ ಮಟ್ಟಕ್ಕೆ ಏರಿಸುತ್ತದೆ ಎಂದು ಚಾನೆಲ್ ಹೇಳಿದೆ. ಈ ಋತುವಿನಲ್ಲಿ, ಟೈಮರ್ ಅನ್ನು 'ಧುಕ್-ಧುಕ್ ಜಿ' ಎಂದು ಮರು ನಾಮಕರಣ ಮಾಡಲಾಗಿದೆ.
ಇದಷ್ಟೇ ಅಲ್ಲ, ಶುಕ್ರವಾರದಂದು 'ಶಾನ್ದಾರ್ ಶುಕ್ರವಾರ್' ಎನ್ನುವ ಹೊಸಾ ಎಪಿಸೋಡ್ ಪ್ರಾರಂಭಿಸಲಾಗಿದೆ, ಖ್ಯಾತನಾಮರು ಈ ಎಪಿಸೋಡ್ನಲ್ಲಿ ಭಾಗವಹಿಸಲಿದ್ದಾರೆ. ಜೀವನದ ವಿವಿಧ ಹಂತಗಳನ್ನು, ಕತೆಗಳನ್ನು ಹೇಳುತ್ತಾ ಸೆಲೆಬ್ರಿಟಿಗಳು ಇದರಲ್ಲಿ ಭಾಗವಹಿಸಲಿದ್ದಾರೆ, ಸಾಮಾಜಿಕ ಕಾರಣಕ್ಕಾಗಿ ಬಚ್ಚನ್ ಜೊತೆ ಇವರುಗಳು ಆಟ ಆಡುತ್ತಿದ್ದಾರೆ.
ಫಾಸ್ಟೆಸ್ಟ್ ಫಿಂಗರ್ ಫಸ್ಟ್ (ಎಫ್ಎಫ್ಎಫ್) ಅನ್ನು ಫಾಸ್ಟ್ ಫಿಂಗರ್ ಫಸ್ಟ್ - ಟ್ರಿಪಲ್ ಟೆಸ್ಟ್ ಎಂದು ಮಾರ್ಪಡಿಸಲಾಗಿದೆ, ಇದರಲ್ಲಿ ಸ್ಪರ್ಧಿ ಮೂರು ಸರಿಯಾದ ಜನರಲ್ ನಾಲೆಡ್ಜ್ ಉತ್ತರಗಳನ್ನು ನೀಡಬೇಕಾಗುತ್ತದೆ. ಮತ್ತು ಕೇಕ್ ಮೇಲೆ ಚೆರ್ರಿ ಹಾಗೂ ಆಡಿಯನ್ಸ್ ಪೋಲ್ ಲೈಫ್ಲೈನ್ ಅನ್ನು ಮತ್ತೆ ತೆರೆಗೆ ತರಲಾಗಿದೆ.
ಬಚ್ಚನ್ ಮತ್ತು ಸಿದ್ಧಾರ್ಥ ಬಸು ಅವರೊಂದಿಗಿನ ಆಪ್ತ ಮತ್ತು ವೈಯಕ್ತಿಕ ಸಂಭಾಷಣೆಯಲ್ಲಿ, ಮೆಗಾಸ್ಟಾರ್ ಅವರು ತಮ್ಮ ಹಳೆಯ ನೆನಪುಗಳನ್ನು, ಅತ್ಯಂತ ಸ್ವಾರಸ್ಯವಾಗಿ ಮೆಲುಕು ಹಾಕಿದ್ದಾರಂತೆ.  ಘಟನೆಗಳನ್ನು ವಿವರಿಸುವಾಗ ಬಾಬು (ಸಿದ್ಧಾರ್ಥ ಬಸು) ಅಮಿತಾಬ್ ಅವರು ಅದೆಷ್ಟು ಚಿಕ್ಕ ವಿವರಗಳನ್ನು ಸಹ ನೆನಪಿನಲ್ಲಿ ಇಟ್ಟುಕೊಂಡಿದ್ದರು ಎಂಬುದನ್ನು ನೋಡಿ ಆಶ್ಚರ್ಯಚಕಿತನಾಗಿದ್ದೇನೆ ಎಂದು ಹೇಳಿದ್ದಾರೆ.
21 ವರ್ಷ ಮತ್ತು 13 ಸೀಜನ್ಗಳ ನಂತರ, ಅಮಿತಾಬ್ ಬಚ್ಚನ್ ಕೌನ್ ಬನೇಗಾ ಕರೋಡ್ ಪತಿಯ ಸೋನಲ್ಲಿ ತನ್ನ ಶಕ್ತಿಯ ರಹಸ್ಯವೇನು ಎಂಬುದನ್ನು ಬಹಿರಂಗಪಡಿಸುತ್ತಾರೆ. ಈ ಋತುವಿನಲ್ಲಿ ಪುನರಾಗಮನವನ್ನು ಮಾಡುವ ಮೂಲಕ, ಅತ್ಯಂತ ಆದ್ಯತೆಯ ಲೈಫ್ಲೈನ್ ಹಾಗೂ ಪ್ರೇಕ್ಷಕರ ವೋಟಿಂಗ್ ಪೋಲ್ ಆಯ್ಕೆ ಮತ್ತೆ ಮರಳಿ ಬಳಸಲಾಗಿದೆ. ಕಳೆದ ವರ್ಷ ಸಾಂಕ್ರಾಮಿಕ ರೋಗದಿಂದಾಗಿ, ನಿರ್ಮಾಪಕರು ಆಡಿಯನ್ಸ್ ಪೋಲ್ ಅವಕಾಶವನ್ನು ನೀಡಿರಲಿಲ್ಲ.
ಕೋವಿಡ್ ಮುನ್ನೆಚ್ಚರಿಕೆಗಳು, ಸಾಮಾಜಿಕ ಅಂತರ ಮತ್ತು ಪ್ರತಿಯೊಬ್ಬರಿಗೂ ಕೋವಿಡ್ ಪರೀಕ್ಷೆಗಳನ್ನು ಮಾಡಿಸಿ, ಈ ಋತುವಿನಲ್ಲಿ ಸ್ಟುಡಿಯೋಗೆ ಪ್ರೇಕ್ಷಕರನ್ನು ಆಹ್ವಾನಿಸಲಾಗಿದೆ ಮತ್ತು ಇದೇ ನಮ್ಮ ಬಚ್ಚನ್ ಅವರ ಶಕ್ತಿ ಮತ್ತು ಟಾನಿಕ್ ಎಂದು ಚಾನೆಲ್ ಹೇಳಿದೆ. ಸ್ಟುಡಿಯೋ ಪ್ರೇಕ್ಷಕರ ನೋಡುವಿಕೆಯು ಈ ಬಾರಿ ಸಂಪೂರ್ಣವಾಗಿ ವಿಭಿನ್ನವಾಗಿದೆ ಮತ್ತು ಈಋತುವನ್ನು ಈಗೀರುವ ಹಂತಕ್ಕಿಂತ ಹೆಚ್ಚಿನ ಮಟ್ಟಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ, ಬಿಗ್ ಬಿ ಜೊತೆಗೆ ವೀಕ್ಷಕರು ಸ್ಟುಡಿಯೋ ಪ್ರೇಕ್ಷಕರ ಆಟವನ್ನು ಸಹ ನೋಡಿ ಆನಂದಿಸುತ್ತಾರೆ. ಕಾರ್ಯಕ್ರಮ ಮತ್ತು ಸ್ಪರ್ಧಿಗಳ ಬಗ್ಗೆ ಅಮಿತಾಬ್ ಬಚ್ಚನ್ ಅವರು ವಿವರಗಳನ್ನು ಹಂಚಿಕೊಳ್ಳಲಿದ್ದಾರೆ "ನಾನು ಯಾರನ್ನಾದರೂ ಹಾಟ್ಸೀಟ್ಗೆ ಆಹ್ವಾನಿಸಿದರೆ, ಅದು ನನ್ನನ್ನು ಮನೆಗೆ ಆಹ್ವಾನಿಸಿದಂತೆ." ಎಂಬ ಕುತೂಹಲಕಾರಿಯಾದ ಅಂಶವನ್ನು ಹೊರಗೆಡಹಲಾಗಿದೆ.
ಕೌನ್ ಬನೇಗಾ ಕರೋಡ್ಪತಿ ತನ್ನ ಹದಿಮೂರನೇ ಸೀಸನ್ ಅನ್ನು ಆಗಸ್ಟ್ 23 ರಿಂದ ರಾತ್ರಿ 9:00 ಗಂಟೆಗೆ ಸೋನಿ ಎಂಟರ್ಟೈನ್ಮೆಂಟ್ ಟೆಲಿವಿಷನ್ ನಲ್ಲಿ ಆರಂಭವಾಗಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಾದ್ಯಂತ ರಕ್ಷಾ ಬಂಧನವನ್ನು ಹೇಗೆ ಆಚರಣೆ ಮಾಡಲಾಗುತ್ತದೆ ಗೊತ್ತಾ?