Select Your Language

Notifications

webdunia
webdunia
webdunia
webdunia

ಲಸಿಕೆ ಪಡೆದಿಲ್ಲ ಎಂದು ಚಿಕಿತ್ಸೆ ಮಾಡಲ್ಲ ಎಂದ ವೈದ್ಯರು!

ಲಸಿಕೆ ಪಡೆದಿಲ್ಲ ಎಂದು ಚಿಕಿತ್ಸೆ ಮಾಡಲ್ಲ ಎಂದ ವೈದ್ಯರು!
ವಾಷಿಂಗ್ಟನ್ , ಶುಕ್ರವಾರ, 28 ಜನವರಿ 2022 (09:31 IST)
ವಾಷಿಂಗ್ಟನ್ : ರೋಗಿಯೊಬ್ಬ ಕೋವಿಡ್-19 ಲಸಿಕೆ ಹಾಕಿಸಿಕೊಂಡಿಲ್ಲ ಎಂಬ ಕಾರಣಕ್ಕೆ ಆತನಿಗೆ ಶಸ್ತ್ರ ಚಿಕಿತ್ಸೆ ಮಾಡಿ ಹೃದಯ ಕಸಿ ಮಾಡಲು ಅಮೆರಿಕದ ಬೋಸ್ಟನ್ ಆಸ್ಪತ್ರೆ ವೈದ್ಯರು ನಿರಾಕರಿಸಿರುವ ಪ್ರಸಂಗ ನಡೆದಿದೆ.

ಅಂಗಾಂಗ ಕಸಿಗೆ ಒಳಗಾಗುವವರಿಗೆ ಕೊರೊನಾ ವೈರಸ್ ವಿರುದ್ಧದ ಲಸಿಕೆ ಅಗತ್ಯವಿದೆ ಎಂದು ಬ್ರಿಗಮ್ ಮತ್ತು ಮಹಿಳಾ ಆಸ್ಪತ್ರೆಯ ವಕ್ತಾರರು ಅಭಿಪ್ರಾಯಪಟ್ಟಿದ್ದಾರೆ.

31 ವರ್ಷ ವಯಸ್ಸಿನ ನನ್ನ ಪುತ್ರ ಸಾವಿನ ಅಂಚಿನಲ್ಲಿದ್ದಾನೆ. ಆತನಿಗೆ ಆದಷ್ಟು ಬೇಗ ಹೃದಯ ಕಸಿ ಆಗಬೇಕಿದೆ. ಆದರೆ ಆತ ಲಸಿಕೆ ಪಡೆದುಕೊಂಡಿಲ್ಲ ಎಂದು ವೈದ್ಯರು ನಿರಾಕರಿಸುತ್ತಿದ್ದಾರೆ. ಇದು ಅವರ ಮೂಲಭೂತ ತತ್ವಗಳಿಗೆ ವಿರುದ್ಧವಾಗಿದೆ ಎಂದು ರೋಗಿಯ ತಂದೆ ಡೇವಿಡ್ ಫರ್ಗುಸನ್ ಅಳಲು ತೋಡಿಕೊಂಡಿದ್ದಾರೆ.

ನನ್ನ ಮಗನನ್ನು ಬೇರೆ ಆಸ್ಪತ್ರೆಗೆ ಸೇರಿಸಲು ಯೋಜಿಸಿದ್ದೇನೆ. ಆದರೆ ಸಮಯ ಮೀರುತ್ತಿದೆ ಎಂದು ರೋಗಿಯ ತಂದೆ ಸಮಸ್ಯೆ ಹೇಳಿಕೊಂಡಿದ್ದಾರೆ. ಅಮೆರಿಕದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಈವರೆಗೆ ಶೇ.62 ಮಂದಿ ಮಾತ್ರ ಲಸಿಕೆ ಎರಡೂ ಡೋಸ್ ಪಡೆದುಕೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಜನಾರ್ದನ ರೆಡ್ಡಿ ಮೇಲೆ ಕ್ರಿಮಿನಲ್ ಕೇಸ್..!