Select Your Language

Notifications

webdunia
webdunia
webdunia
webdunia

ಈ ಚಾಕೋಲೆಟ್ ನ ಬೆಲೆ ಕೇಳಿದ್ರೆ ನಿಮ್ಮ ತಲೆ ತಿರುಗುವುದು ಗ್ಯಾರಂಟಿ!

ಈ ಚಾಕೋಲೆಟ್ ನ ಬೆಲೆ ಕೇಳಿದ್ರೆ ನಿಮ್ಮ ತಲೆ ತಿರುಗುವುದು ಗ್ಯಾರಂಟಿ!
ಪೋರ್ಚುಗಲ್ , ಭಾನುವಾರ, 25 ಮಾರ್ಚ್ 2018 (11:54 IST)
ಪೋರ್ಚುಗಲ್: ಚಾಕೋಲೆಟ್ ಎಂದ ತಕ್ಷಣ ಬಾಯಲ್ಲಿ ನೀರು ಸುರಿಸದವರೇ ಇಲ್ಲ ಅನ್ನಬೇಕು. ಯಾಕೆಂದರೆ ಚಾಕೋಲೆಟ್ ನ ಸವಿಯೇ ಅಂತದ್ದು.  ಅದರಲ್ಲೂ ಫಾರಿನ್ ಚಾಕೋಲೆಟ್ ಅಂದ ತಕ್ಷಣ ಮತ್ತಷ್ಟು ಕುತೂಹಲ, ತಿನ್ನಬೇಕು ಅನ್ನುವ ಚಪಲ ಜಾಸ್ತಿ. ಆದರೆ ಇಲ್ಲೊಂದು ಚಾಕೋಲೆಟ್ ಇದೆ. ನೋಡುವುದಕ್ಕೆ ಪುಟಾಣಿಯಾದರೂ ಇದರ ಬೆಲೆ ಕೇಳಿದರೆ ತಲೆ ತಿರುಗುತ್ತೆ. ಬೆಲೆ ಎಷ್ಟಾದರೂ ಪರ್ವಾಗಿಲ್ಲ ಅನ್ನುವವರು ಈ ಚಾಕೋಲೆಟ್ ತಿನ್ನಬಹುದು.


ಪೋರ್ಚುಗಲ್ ನಲ್ಲಿ ನಡೆಯುತ್ತಿರುವ ಒಬಿಡೋಸ್ ಚಾಕೋಲೆಟ್ ಉತ್ಸವದಲ್ಲಿ ಈ ದುಬಾರಿಯಾದ ಪುಟಾಣಿ ಚಾಕೋಲೆಟ್ ‘ಗ್ಲೋರಿಯಸ್’ ಅನ್ನು ಪ್ರದರ್ಶನಕ್ಕಿಡಲಾಗಿದೆ. ಇದರ ಬೆಲೆ ಸರಿಸುಮಾರು 6 ಲಕ್ಷ ರೂಪಾಯಿಯಂತೆ!


ಅಂದ ಹಾಗೇ, ಈ ಚಾಕೋಲೆಟ್ ಗೆ ಚಿನ್ನದ ಲೇಪನವನ್ನು ನೀಡಲಾಗಿದೆಯಂತೆ. ಕೇಸರಿ ದಳ, ಮಡಗಾಸ್ಕರ್ ನ ವೆನಿಲ್ಲಾ, ಚಿನ್ನದ ಫ್ಲೇಕ್ಸ್ ಹಾಗೂ ವೈಟ್ ಟ್ರಫಲ್ ಅನ್ನು ಈ ಚಾಕೋಲೇಟ್ ಹೊಂದಿದೆಯಂತೆ. ಇದು ಜಗತ್ತಿನ ಅತ್ಯಂತ ದುಬಾರಿ ಚಾಕೋಲೆಟ್ ಆಗಿದೆ. ಇದನ್ನು ತಯಾರಿಸಿದ್ದು ಡೇನಿಯೆಲ್ ಗೋಮ್ಸ್ ಎಂಬಾತ. ಕಳೆದ  ಒಂದು ವರ್ಷದಿಂದ ಇದರ ತಯಾರಿಯಲ್ಲಿ ನಡೆಸಿದ್ದಾನಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿಯವರೇ, ತಾಯಿ ಚಾಮುಂಡಿ ನಿಮಗೆ ಸ್ವಲ್ಪ ಪ್ರಬುದ್ಧತೆ ಕೊಡಲಿ: ಎಚ್ ಡಿಕೆ ಟ್ವೀಟ್