Publish Date: Sun, 25 Mar 2018 (11:16 IST)
Updated Date: Sun, 25 Mar 2018 (11:17 IST)
ಬೆಂಗಳೂರು: ಮೈಸೂರು ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜೆಡಿಎಸ್ ಮೇಲೆ ವಾಗ್ದಾಳಿ ನಡೆಸಿರುವುದಕ್ಕೆ ಎಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಲೇವಡಿ ಮಾಡಿರುವ ರಾಹುಲ್ ಗಾಂಧಿಗೆ ತಿರುಗೇಟು ನೀಡಿರುವ ಎಚ್ ಡಿಕೆ ‘ತಾಯಿ ಚಾಮುಂಡಿ ನಿಮ್ಮ ಅಪ್ರಬುದ್ಧತೆ ನಿವಾರಿಸಲಿ’ ಎಂದು ಲೇವಡಿ ಮಾಡಿದ್ದಾರೆ.
‘ರಾಹುಲ್ ಗಾಂಧಿಯವರೇ ಚಾಮುಂಡಿ ತಾಯಿ ನಾಡು ಮೈಸೂರಿಗೆ ಬಂದಿದ್ದೀರಿ. ನೀವು ನಂಬಿದ ಡೋಂಗಿ ಸಿದ್ಧಾಂತಗಳು, ದೇಶಾದ್ಯಂತ ನಿಮಗೆ ಕೊಟ್ಟ ಹೊಡೆತಕ್ಕೆ ನಲುಗಿ ಹಿಂದಿನ ನಾಸ್ತಿಕತೆಯನ್ನು ಬಿಟ್ಟು ಬಿಜೆಪಿಯವರಂತೆ ಕಪಟ ಭಕ್ತಿ ಪ್ರದರ್ಶಿಸುತ್ತಾ ಟೆಂಪಲ್ ರನ್ ಕೈಗೊಂಡಿದ್ದೀರಿ. ನನಗೆ ಶಕ್ತಿ ನೀಡಿದ ಆ ತಾಯಿ ಚಾಮುಂಡೇಶ್ವರಿ ನಿಮಗೂ ಅಪ್ರಬುದ್ಧತೆ ನಿವಾರಿಸಲಿ’ ಎಂದು ಎಚ್ ಡಿಕೆ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ