Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ಭಾಷಣಕ್ಕೆ ಮೂಲ ಕಾಂಗ್ರೆಸ್ಸಿಗರ ಮುನಿಸು

ರಾಹುಲ್ ಗಾಂಧಿ ಭಾಷಣಕ್ಕೆ ಮೂಲ ಕಾಂಗ್ರೆಸ್ಸಿಗರ ಮುನಿಸು
ಮೈಸೂರು , ಭಾನುವಾರ, 25 ಮಾರ್ಚ್ 2018 (10:14 IST)
ಮೈಸೂರು: ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಮಿಸಿದ ರಾಹುಲ್ ಗಾಂಧಿ ಭಾಷಣದಲ್ಲಿ ಹೇಳಿದ ವಿಷಯವೊಂದರ ಬಗ್ಗೆ ಮೂಲ ಕಾಂಗ್ರೆಸ್ಸಿಗರು ಸಿಟ್ಟಾಗಿದ್ದಾರೆ.

ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಜೆಡಿಎಸ್ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ. ಜೆಡಿಎಸ್ ಎಂದರೆ ಜನತಾ ದಳ ಸೆಕ್ಯುಲರ್ ಅಲ್ಲ, ಜನತಾದಳ ಸಂಘ ಪರಿವಾರ ಎಂದು ಟೀಕಿಸಿದ್ದರು. ಕಳೆದ ಬಾರಿ ಕರಾವಳಿ ಪ್ರವಾಸ ಸಂದರ್ಭದಲ್ಲಿಯೂ ಜೆಡಿಎಸ್ ಎಂದರೆ ಬಿಜೆಪಿಯ ಬಿ ಟೀಂ ಎಂದು ಜರೆದಿದ್ದರು.

ಇದು ಮೂಲ ಕಾಂಗ್ರೆಸಿಗರ ಮುನಿಸಿಗೆ ಕಾರಣವಾಗಿದೆ. ಒಂದು ವೇಳೆ ಚುನಾವಣೆಯಲ್ಲಿ ಯಾರಿಗೂ ಬಹುಮತ ಬಾರದೇ ಅತಂತ್ರ ಸ್ಥಿತಿ ಬಂದರೆ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುವುದರ ಬಗ್ಗೆ ಸಮಾಲೋಚಿಸಬೇಕಾಗುತ್ತದೆ. ಆದರೆ ಇದೀಗ ಜೆಡಿಎಸ್ ಬಗ್ಗೆ ಈ ರೀತಿ ಮಾತನಾಡಿ ಸಂಬಂಧ ಹಾಳು ಮಾಡಿಕೊಂಡರೆ ಮುಂದೆ ಮೈತ್ರಿ ಮಾಡಿಕೊಳ್ಳಬಹುದಾದ ಸಂದರ್ಭ ಬಂದರೆ ಕಷ್ಟವಾಗಬಹುದು ಎಂದು ಮೂಲ ಕಾಂಗ್ರೆಸ್ಸಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ರಾಹುಲ್ ಗಾಂಧಿಯವರ ಈ ಮಾತಿನ ಹಿಂದೆ ಸಿಎಂ ಸಿದ್ದರಾಮಯ್ಯ ಮತ್ತು ಟೀಂ ಕೈವಾಡವಿದೆ ಎಂಬ ಗುಸು ಗುಸು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ     

Share this Story:

Follow Webdunia kannada

ಮುಂದಿನ ಸುದ್ದಿ

ದೇವಾಲಯ ಸುತ್ತುವ ರಾಹುಲ್ ಗಾಂಧಿಗೆ ಬಿಎಸ್ ವೈ ಲೇವಡಿ ಮಾಡಿದ್ದು ಹೀಗೆ