ಮಾಜಿ ಪ್ರೇಯಸಿಯ ಪ್ರೀತಿ ಗಳಿಸಲು ಯುವಕ ಮಾಡಿದ್ದೇನು ಗೊತ್ತಾ?

ಬುಧವಾರ, 30 ಅಕ್ಟೋಬರ್ 2019 (06:13 IST)
ಜರ್ಮನಿ : ಯುವಕನೊಬ್ಬ ಪ್ರಿಯತಮೆಯನ್ನು ಮೆಚ್ಚಿಸಲು ನಗ್ನವಾಗಿ ಕಾರಾಗೃಹದ ಗೋಡೆಗಳನ್ನು ಏರಿದ ಘಟನೆ ಜರ್ಮನಿಯಲ್ಲಿ ನಡೆದಿದೆ.18 ವರ್ಷದ ಈ ಯುವಕ ತನ್ನ ವಯಸ್ಸಿನ ಯುವತಿಯನ್ನು ಪ್ರೀತಿಸುತ್ತಿದ್ದು, ಆದರೆ ಆಕೆ ಜೈಲುವಾಸ ಅನುಭವಿಸುತ್ತಿದ್ದಾಳೆ. ಆಕೆ ಇತ್ತೀಚೆಗೆ ಯುವಕನಿಗೆ ಜೈಲಿನ ಫೋನಿನಿಂದ ಕರೆ ಮಾಡಿ ಬ್ರೇಕ್ ಅಪ್ ಮಾಡಿಕೊಂಡಿದ್ದಾಳೆ. ಇದರಿಂದ ಬೇಸರಗೊಂಡ ಯುವಕ ಮತ್ತೆ ಆಕೆಯ ಮನವೊಲಿಸಿ ಪ್ರೀತಿಸುವಂತೆ ಕೇಳಲು ನಗ್ನವಾಗಿ ಜೈಲಿನ ಗೋಡೆಗಳನ್ನು ಏರಿ ಆಕೆ ಇದ್ದ  ಕೊಠಡಿಯ ಕಿಟಕಿಯ ಬಳಿ ಬಂದಿದ್ದಾನೆ.


ಆದರೆ ಅಷ್ಟರಲ್ಲಿ ಭದ್ರತಾ ಸಿಬ್ಬಂದಿಗಳು ಬಂದು ಅಗ್ನಿಶಾಮಕ ದಳದ ಏಣಿ ಮೂಲಕ ಆತನನ್ನು ಕೆಳಗೆ ಇಳಿಸಿದ್ದಾರೆ ಎನ್ನಲಾಗಿದೆ. ಗೆಳತಿಯನ್ನು ಮೆಚ್ಚಿಸುವ ಆತನ ಪ್ರಯತ್ನ ಕೊನೆಗೂ ವ್ಯರ್ಥವಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ಏರ್ಟೆಲ್ ಹಾಗೂ ವೊಡಾಫೋನ್ ನಿಂದ ಬಂಪರ್ ಆಫರ್