Select Your Language

Notifications

webdunia
webdunia
webdunia
webdunia

ಕೇರಳಕ್ಕೆ ಹಣಕಾಸು ನೆರವು ನೀಡುವ ವಿಚಾರದ ಬಗ್ಗೆ ಯುಎಇ ಸರಕಾರ ಹೇಳಿದ್ದೇನು ಗೊತ್ತಾ?

ಕೇರಳಕ್ಕೆ ಹಣಕಾಸು ನೆರವು ನೀಡುವ ವಿಚಾರದ ಬಗ್ಗೆ ಯುಎಇ ಸರಕಾರ ಹೇಳಿದ್ದೇನು ಗೊತ್ತಾ?
ಅಬುಧಾಬಿ , ಶನಿವಾರ, 25 ಆಗಸ್ಟ್ 2018 (12:47 IST)
ಅಬುಧಾಬಿ : ನೈಸರ್ಗಿಕ ವಿಕೋಪಕ್ಕೆ ತುತ್ತಾದ ಕೇರಳಕ್ಕೆ ಯಾವುದೇ ರೀತಿಯಾದ ಹಣಕಾಸು ನೆರವು ನೀಡುವ ಬಗ್ಗೆ ಯಾವುದೇ ಘೋಷಣೆಯನ್ನು ತಾವು ಮಾಡಿಲ್ಲ ಎಂದು ಯುಎಇ ಸರಕಾರ ತಿಳಿಸಿದೆ.


ಗುರುವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ‘ಯುಎಇ ಸರಕಾರ ಕೇರಳಕ್ಕೆ 700 ಕೋಟಿ ರೂ. ಹಣಕಾಸು ನೆರವು ನೀಡುವುದಾಗಿ ಹೇಳಿದೆ' ಎಂದು ತಿಳಿಸಿದ್ದರು. ಮಾತ್ರವಲ್ಲದೆ ಅಬುಧಾಭಿಯ ಕ್ರೌನ್‌ ಪ್ರಿನ್ಸ್‌  ಶೇಖ್‌ ಮೊಹಮ್ಮದ್‌ ಬಿನ್‌ ಝಾಯೇದ್‌ ಅಲ್‌ ನಹ್ಯಾನ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಫೋನ್‌ ಕರೆ ಮಾಡಿ ಯುಎಇ ನೆರವು ನೀಡುವುದಾಗಿ ತಿಳಿಸಿದ್ದಾರೆ ಎಂದೂ ಪಿಣರಾಯಿ ಹೇಳಿದ್ದರು.


ಆದರೆ “ಯಾವುದೇ ನಿರ್ದಿಷ್ಟ ಮೊತ್ತದ ಹಣಕಾಸು ನೆರವು ನೀಡುವ ಬಗ್ಗೆ ಯುಎಇ ಈ ತನಕ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ'' ಎಂದು ಯುಎಇ ರಾಯಭಾರಿ ಅಹ್ಮದ್‌ ಅಲ್‌ಬನ್ನಾ ಹೇಳಿರುವುದಾಗಿ  ವರದಿಯಾಗಿದೆ. ಅಲ್ಲದೇ ಯುಎಇ ಆರ್ಥಿಕ ನೆರವು ಸ್ವೀಕರಿಸುವ ವಿಷಯದಲ್ಲಿ ಕೇಂದ್ರ ಮತ್ತು ಕೇರಳ ಸರಕಾರ ನಡುವೆ ಈಗಾಗಲೇ ವಾಗ್ವಾದ ಕೂಡ ನಡೆದಿದೆ. ಇದನ್ನು ಗಮನಿಸಿರುವ ಯುಎಇ ಸರಕಾರ ಈ ಅಧಿಕೃತ ಹೇಳಿಕೆ ನೀಡಿರುವುದಾಗಿ ವರದಿ ತಿಳಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಹೈ ಅಲರ್ಟ್ ಘೋಷಿಸಿದ ಬಿಬಿಎಂಪಿ! ಕಾರಣವೇನು ಗೊತ್ತಾ?