Select Your Language

Notifications

webdunia
webdunia
webdunia
webdunia

ನಿರಾಶ್ರಿತರ ಕೇಂದ್ರಕ್ಕೆ ಬಂದ ಕೇರಳ ಸಿಎಂ ಪಿನರಾಯ್ ವಿಜಯನ್ ಸಂತ್ರಸ್ತರಿಂದ ಏನೆಲ್ಲಾ ಮಾತು ಕೇಳಬೇಕಾಗಿ ಬಂತು ನೋಡಿ!

ನಿರಾಶ್ರಿತರ ಕೇಂದ್ರಕ್ಕೆ ಬಂದ ಕೇರಳ ಸಿಎಂ ಪಿನರಾಯ್ ವಿಜಯನ್ ಸಂತ್ರಸ್ತರಿಂದ ಏನೆಲ್ಲಾ ಮಾತು ಕೇಳಬೇಕಾಗಿ ಬಂತು ನೋಡಿ!
ತಿರುವನಂತಪುರಂ , ಶುಕ್ರವಾರ, 24 ಆಗಸ್ಟ್ 2018 (08:05 IST)
ತಿರುವನಂತಪುರಂ: ಕೇರಳದಲ್ಲಿ ಪ್ರವಾಹದಿಂದಾಗಿ ಜನ ಜೀವನ ಸಂಕಷ್ಟ ಅನುಭವಿಸುತ್ತಿರುವುದು ಎರಡು ವಾರಗಳೇ ಆಗಿವೆ. ಹಲವರು ಮನೆ ಮಠ ಕಳೆದುಕೊಂಡು ಗಂಜಿ ಕೇಂದ್ರ ಸೇರುವಂತಾಗಿದೆ.
 

ಆದರೆ ಇಷ್ಟು ದಿನಗಳ ಬಳಿಕ ಸಿಎಂ ಪಿನರಾಯ್ ವಿಜಯನ್ ಗಂಜಿ ಕೇಂದ್ರಗಳಿಗೆ ಭೇಟಿ ಕೊಟ್ಟು ಅಲ್ಲಿನ ವ್ಯವಸ್ಥೆ ಬಗ್ಗೆ ವಿಚಾರಿಸಿದ್ದಾರೆ. ಇದನ್ನು ನೋಡಿ ಅಲ್ಲಿದ್ದ ಸಂತ್ರಸ್ತರ ಸಹನೆಯ ಕಟ್ಟೆಯೊಡೆದಿದೆ.

ಕೆಲವರು ಇಷ್ಟು ತಡವಾಗಿ ಬಂದಿದ್ದಕ್ಕೆ ಕ್ಲಾಸ್ ತೆಗೆದುಕೊಂಡರೆ ಇನ್ನು ಕೆಲವರು ಗಂಜಿ ಕೇಂದ್ರದಲ್ಲಿ ಆಹಾರ ವ್ಯವಸ್ಥೆ, ಶೌಚಾಲಯ ಅವ್ಯವಸ್ಥೆ, ಅಶುದ್ಧ ಕುಡಿಯುವ ನೀರು ಮತ್ತು ಗಂಜಿ ಕೇಂದ್ರಗಳಲ್ಲಿ ಹಾವು ಮತ್ತಿತರ ಪ್ರಾಣಿಗಳ ಉಪಟಳಗಳ ಬಗ್ಗೆ ಸಿಎಂ ಪಿನರಾಯ್ ವಿಜಯನ್ ರನ್ನು ತರಾಟೆಗೆ ತೆಗೆದುಕೊಂಡರು.

ನಾಮಕಾವಸ್ಥೆಗಾಗಿ ಇಲ್ಲಿಗೆ ಭೇಟಿ ನೀಡುತ್ತಿದ್ದಾರಷ್ಟೇ. ಭೇಟಿ ನೀಡಿದ್ದೇನೆ ಎಂದು ತೋರಿಸಿಕೊಳ‍್ಳುವುದಕ್ಕಷ್ಟೇ ಈ ಭೇಟಿ ಎಂದು ಗಂಜಿ ಕೇಂದ್ರದಲ್ಲಿನ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂತೂ ಗಂಇ ಕೇಂದ್ರಗಳಿಗೆ ಹೋಗಿ ಸಮಸ್ಯೆ ಆಲಿಸಲು ಹೋದ ಸಿಎಂಗೆ ಜನ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

Share this Story:

Follow Webdunia kannada

ಮುಂದಿನ ಸುದ್ದಿ

ಕೇರಳ ಪ್ರವಾಹಕ್ಕೆ ದುಬೈ ನೀಡಿದ ಸಹಾಯವನ್ನು ಭಾರತ ಸರ್ಕಾರ ನಿರಾಕರಿಸುತ್ತಿರುವುದರ ನಿಜ ಕಾರಣ ಏನು ಗೊತ್ತಾ?!