ಕೆಲಸ ಬಿಡಲು ಒಪ್ಪದ ಪತ್ನಿಗೆ ಪತಿ ಮಾಡಿದ್ದೇನು ಗೊತ್ತೇ?

ಗುರುವಾರ, 28 ನವೆಂಬರ್ 2019 (06:14 IST)
ಲಾಹೋರ್ : ಕೆಲಸ ಬಿಡಲು ಒಪ್ಪದ ಪತ್ರಕರ್ತೆಯನ್ನು ಆಕೆಯ ಪತಿಯೇ ಗುಂಡಿಕ್ಕಿ ಕೊಂದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.ಉರೂಜ್ ಇಕ್ಬಾಲ್ (27) ಕೊಲೆಯಾದ ಪತ್ರಕರ್ತೆ. ದಿಲಾವರ್ ಅಲಿ ಕೊಲೆ ಮಾಡಿದ ಪತಿ. ಪತಿ ಹಾಗೂ ಪತಿ ಇಬ್ಬರು ಉರ್ದು ಪತ್ರಿಕೆಗಳಲ್ಲಿ ಕೆಲಸಮಾಡುತ್ತಿದ್ದರು. ಏಳು ತಿಂಗಳ ಹಿಂದೆ ಮದುವೆಯಾದ ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು. ಆಕೆಗೆ ಕೆಲಸ ಬಿಡುವಂತೆ ಪತಿ ಒತ್ತಾಯಿಸುತ್ತಿದ್ದ. ಆದರೆ ಇದಕ್ಕೆ ಆಕೆ ಒಪ್ಪದಿದ್ದಾಗ ಆಕೆಯ ತಲೆಗೆ ಗುಂಡು ಹಾರಿಸಿದ್ದಾನೆ. ಇದರಿಂದ ಆಕೆ ಸಾವನಪ್ಪಿದ್ದಾಳೆ.


ಈ ಬಗ್ಗೆ ಆಕೆಯ ಸಹೋದರ ಪತಿಯ ವಿರುದ್ಧ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಪ್ರಚಾರ ಮಾಡದಿದ್ದರೆ ಇವರು ಮಂತ್ರಿಯಾಗ್ತಾರಂತೆ