Select Your Language

Notifications

webdunia
webdunia
webdunia
webdunia

ಮಹಡಿಯಿಂದ ಬಿದ್ದ ಮಗು ರಕ್ಷಿಸಿದ ಡೆಲಿವರಿ ಬಾಯ್!

ಮಹಡಿಯಿಂದ ಬಿದ್ದ ಮಗು ರಕ್ಷಿಸಿದ ಡೆಲಿವರಿ ಬಾಯ್!
ವಿಯೆಟ್ನಾಂ , ಮಂಗಳವಾರ, 3 ಮೇ 2022 (11:12 IST)
12ನೇ ಮಹಡಿಯ ಕಟ್ಟಡದ ಬಾಲ್ಕನಿಯಿಂದ ಕೆಳಗೆ ಬೀಳುತ್ತಿದ್ದ ಮಗುವೊಂದನ್ನು ಡೆಲಿವರಿ ಬಾಯ್ ಒಬ್ಬರು ರಕ್ಷಿಸಿದ ಅಚ್ಚರಿಯ ಘಟನೆ ವಿಯೆಟ್ನಾಂ ರಾಜಧಾನಿ ಹನೋಯ್ನಲ್ಲಿ ನಡೆಸಿದೆ.

ಸಿಸಿಟೀವಿಯಲ್ಲಿ ಸೆರೆಯಾಗಿರುವ ಈ ದೃಶ್ಯ ಭಾರೀ ವೈರಲ್ ಆಗಿದೆ. ಗ್ರಾಹಕರೊಬ್ಬರು ಆರ್ಡರ್ ಮಾಡಿದ್ದ ವಸ್ತುವೊಂದನ್ನು ನೀಡಲು ಡೆಲಿವರಿ ಬಾಯ್ ಕಾರಿನಲ್ಲಿ ಆಗಮಿಸಿದ್ದರು.

ಗ್ರಾಹಕರು ಇನ್ನೂ ಮನೆಯಿಂದ ಹೊರಗೆ ಬಂದಿರದ ಕಾರಣ ಅವರು ಮನೆಯ ಹೊರಗೆ ಕಾರಿನಲ್ಲಿ ಕುಳಿತಿದ್ದರು. ಈ ವೇಳೆ ಮಗುವೊಂದು 12ನೇ ಮಹಡಿಯಿಂದ ಕೆಳಕ್ಕೆ ಜಾರಿದ್ದನ್ನು ನೋಡಿದ ಎಂಜಾಕ್ ಮನ್್ಹ ಎಂಬ ಡೆಲಿವರಿ ಬಾಯ್ ಕೂಡಲೇ ಕಾರಿನಿಂದ ಇಳಿದು ಓಡಿಹೋಗಿ, ಮಗುವನ್ನು ಬಾಲ್ ರೀತಿಯಲ್ಲಿ ಕ್ಯಾಚ್ ಹಿಡಿದು ರಕ್ಷಿಸಿದ್ದಾರೆ.

ಈ ವೇಳೆ ಮಗುವಿನ ಸಣ್ಣಪುಟ್ಟಗಾಯಗಳಾಗಿದೆಯಾದರೂ, ಅದು ಪ್ರಾಣಾಪಾಯದಿಂದ ಪಾರಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಂಚಾರಿ ಪೊಲೀಸರಿಗೆ ಹೊಡೆದ ಯುವಕ ಅರೆಸ್ಟ್