Select Your Language

Notifications

webdunia
webdunia
webdunia
webdunia

ಡೆಲಿವರಿ ವಿಳಂಬ ಮಾಡಿದ್ದಕ್ಕೆ ಹೋಟೆಲ್ ಮಾಲೀಕನಿಗೆ ಗುಂಡಿಕ್ಕಿ ಕೊಂದ ಡೆಲಿವರಿ ಬಾಯ್!

Delivery boy
ದೆಹಲಿ , ಬುಧವಾರ, 1 ಸೆಪ್ಟಂಬರ್ 2021 (20:57 IST)
ಆರ್ಡರ್ ಮಾಡಿದ ಫುಡ್ ನೀಡಲು ತಡ ಮಾಡಿದ್ದಕ್ಕೆ ಸ್ವಿಗ್ಗಿ ಕಂಪನಿಯ ಡೆಲಿವರಿ ಬಾಯ್ ರೆಸ್ಟೋರೆಂಟ್ ಮಾಲೀಕನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಭೀಕರ ಘಟನೆ ದೆಹಲಿಯ ಗ್ರೇಟರ್ ನೋಯ್ಡಾದಲ್ಲಿ ಸಂಭವಿಸಿದೆ.
ಆನ್ ಲೈನ್ ಮೂಲಕ ಬಂದ ಆರ್ಡರ್ ಗಳನ್ನು ಸ್ವಿಗ್ಗಿ ಮೂಲಕ ಆಹಾರ ಪೂರೈಸುವ ಜಮ್ ಜಮ್ ರೆಸ್ಟೋರೆಂಟ್ ನಡೆಸುತ್ತಿದ್ದ ಸುನೀಲ್ ಹತ್ಯೆಯಾಗಿದ್ದು, ಹತ್ಯೆ ಮಾಡಿದ ಡೆಲಿವರಿ ಬಾಯ್ ನಾಪತ್ತೆಯಾಗಿದ್ದಾನೆ.
ಸ್ವಿಗ್ಗಿ ಡೆಲಿವರಿ ಬಾಯ್ ಎರಡು ಆರ್ಡರ್ ಮಾಡಿದ್ದು, ನಾರಾಯಣ್ ಎಂಬ ಹೋಟೆಲ್ ಸಿಬ್ಬಂದಿ ಚಿಕನ್ ಬಿರಿಯಾನಿಯನ್ನು ತಕ್ಷಣವೇ ನೀಡಿದ್ದು, ಮತ್ತೊಂದು ಆರ್ಡರ್ ನೀಡಲು ಸ್ವಲ್ಪ ತಡವಾಗುತ್ತದೆ ಎಂದು ಹೇಳಿದ್ದಾನೆ. ಇದರಿಂದ ಅಸಮಾಧಾನಗೊಂಡ ಡಿಲಿವರಿ ಬಾಯ್ ನಿಂದಿಸಲು ಆರಂಭಿಸಿದ್ದಾನೆ. 
ಹೋಟೆಲ್ ಸಿಬ್ಬಂದಿ ಮತ್ತು ಡೆಲಿವರಿ ಬಾಯ್ ನಡುವೆ ಜಗಳ ಆರಂಭವಾಗಿದ್ದು, ಮಾಲೀಕ ಸುನೀಲ್ ಮಧ್ಯಪ್ರವೇಶಿಸಿದಾಗ ಡೆಲಿವರಿ ಬಾಯ್ ಗನ್ ತೆಗೆದು ಗುಂಡು ಹಾರಿಸಿದ್ದಾನೆ. ಡೆಲಿವರಿ ಬಾಯ್ ಕುಡಿದ ಮತ್ತಿನಲ್ಲಿದ್ದು ಅವನಿಗೆ ಜೊತೆಯಲ್ಲಿದ್ದ ಮತ್ತೊಬ್ಬ ಸಹಾಯ ಮಾಡಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನದಿ ನೀರಿನ ಸೆಳೆತಕ್ಕೆ ಯುವಕನೋರ್ವ ನೀರುಪಾಲಾದ ಘಟನೆ