Publish Date: Sat, 21 May 2022 (10:08 IST)
Updated Date: Sat, 21 May 2022 (11:11 IST)
ನ್ಯಾಟೋ ವಿಸ್ತರಣೆಗೆ ಪ್ರತಿಯಾಗಿ ಪಶ್ಚಿಮದ ಮಿಲಿಟರಿ ಜಿಲ್ಲೆಯಲ್ಲಿ 12 ಹೊಸ ಸೇನಾ ಘಟಕಗಳು ಮತ್ತು ವಿಭಾಗಗಳ ನೆಲೆಯನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ರಷ್ಯಾ ರಕ್ಷಣಾ ಸಚಿವ ಸೆರ್ಗೈ ಶೋಯಿಗು ತಿಳಿಸಿದ್ದಾರೆ.
ಸ್ವೀಡನ್ ಮತ್ತು ಫಿನ್ಲೆಂಡ್ ನ್ಯಾಟೋ ಸೇರಲು ಅರ್ಜಿ ಸಲ್ಲಿಸಿರುವುದನ್ನು ವರ್ಚುವಲ್ ಸಭೆಯಲ್ಲಿ ಉಲ್ಲೇಖಿಸಿದ ಅವರು, ಪಶ್ಚಿಮದ ಮಿಲಿಟರಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬೆದರಿಕೆಗೆ ಪ್ರತಿಯಾಗಿ ಈ ನಿರ್ಧಾರಕ್ಕೆ ಬರಲಾಗಿದೆ.
ಸೇನೆಯು ಎರಡು ಸಾವಿರಕ್ಕೂ ಹೆಚ್ಚು ಯೂನಿಟ್ ಸೇನಾ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳನ್ನು ಶೀಘ್ರವೇ ಪಡೆಯಲಿದೆ ಎಂದು ಹೇಳಿದ್ದಾರೆ.