SIPRI ವರದಿಯ ಪ್ರಕಾರ ವಿಶ್ವದಲ್ಲಿ ಐದು ರಾಷ್ಟ್ರಗಳು ಮಿಲಿಟರಿ ಮೇಲೆ ಹೆಚ್ಚು ಖರ್ಚು ಮಾಡುತ್ತಿವೆ.
ವಿಶ್ವದ ದೊಡ್ಡಣ್ಣ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ಚೀನಾ, ಭಾರತ, ಬ್ರಿಟನ್ ಮತ್ತು ರಷ್ಯಾ ನಂತರದ ಸ್ಥಾನಗಳಲ್ಲಿದೆ.
2021ರಲ್ಲಿ ವಿಶ್ವದ ಎಲ್ಲ ದೇಶಗಳು ಮಿಲಿಟರಿ ಮೇಲೆ 2.1 ಟ್ರಿಲಿಯನ್ ಯುಎಸ್ ಡಾಲರ್ ಖರ್ಚು ಮಾಡಿದ್ದು ಇದರಲ್ಲಿ ಈ ಐದು ದೇಶಗಳು 62% ಖರ್ಚು ಹೊಂದಿವೆ.
ಜಾಗತಿಕ ದೇಶಗಳ ಒಟ್ಟು ಮಿಲಿಟರಿ ಖರ್ಚುನಲ್ಲಿ ಅಮೆರಿಕ 38% ಹೂಡಿಕೆ ಹೊಂದಿದ್ದರೆ ಚೀನಾ 14% ಖರ್ಚು ಮಾಡುತ್ತಿದೆ. ಚೀನಾ 27 ವರ್ಷಗಳಿಂದ ಗಣನೀಯವಾಗಿ ಮಿಲಿಟರಿ ಖರ್ಚು ಹೆಚ್ಚು ಮಾಡುತ್ತಾ ಬಂದಿದೆ.
2016 ರಿಂದ 2019 ವರೆಗೂ ಮಿಲಿಟರಿ ಮೇಲೆ ಖರ್ಚು ಕಡಿಮೆ ಮಾಡಿದ್ದ ರಷ್ಯಾ ಈಗ ಮತ್ತೆ ತನ್ನ ಖರ್ಚು ಹೆಚ್ಚಿಸಿದೆ. ಉಕ್ರೇನ್ನಲ್ಲಿ ಮಿಲಿಟರಿ ವೆಚ್ಚವು 2021 ರಲ್ಲಿ 5.9 ಶತಕೋಟಿಗೆ ಕುಸಿದಿದ್ದರೂ, ಅದು ಅದರ ಉಆP ಯ 3.2 ಶೇಕಡಾವನ್ನು ಹೊಂದಿದೆ.