Select Your Language

Notifications

webdunia
webdunia
webdunia
webdunia

ಸೈಬರ್ ಬ್ಲಾಕ್ಮೇಲ್: ಫೇಸ್ಬುಕ್ಗೆ ನೋಟಿಸ್ ನೀಡಿದ ಉತ್ತರಾಖಂಡ ಹೈಕೋರ್ಟ್

ಸೈಬರ್ ಬ್ಲಾಕ್ಮೇಲ್: ಫೇಸ್ಬುಕ್ಗೆ ನೋಟಿಸ್ ನೀಡಿದ ಉತ್ತರಾಖಂಡ ಹೈಕೋರ್ಟ್
ನೈನಿತಾಲ್ , ಗುರುವಾರ, 9 ಸೆಪ್ಟಂಬರ್ 2021 (14:35 IST)
ನೈನಿತಾಲ್ : ಫೇಸ್ಬುಕ್ ಖಾತೆಯನ್ನು ನಕಲು ಮಾಡಿ, ಅದರಲ್ಲಿರುವ ಚಿತ್ರ-ವಿಡಿಯೊಗಳನ್ನು ಅಶ್ಲೀಲವಾಗಿ ಚಿತ್ರಿಸಿ, ಬ್ಲಾಕ್ ಮೇಲ್ ಮಾಡುತ್ತಿದ್ದಾರೆಂದು ಆರೋಪಿಸಿ ವಕೀಲರೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (ಪಿಐಎಲ್) ಸಂಬಂಧಿಸಿದಂತೆ ಉತ್ತರಾಖಂಡ ಹೈಕೋರ್ಟ್, ಫೇಸ್ಬುಕ್, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ.

ಬುಧವಾರ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಆರ್.ಎಸ್. ಚೌಹಾಣ್ ಮತ್ತು ನ್ಯಾಯಮೂರ್ತಿ ಅಲೋಕ್ ಕುಮಾರ್ ವರ್ಮಾ ಅವರನ್ನೊಳಗೊಂಡ ನ್ಯಾಯಪೀಠ, ಫೇಸ್ಬುಕ್ನ ಭಾರತದ ಮುಖ್ಯಸ್ಥರಿಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪ್ರತಿಕ್ರಿಯೆ ಸಲ್ಲಿಸುವಂತೆ ನೋಟಿಸ್ ಜಾರಿ ಮಾಡಿದೆ. ಹಾಗೆಯೇ, ಉತ್ತರಾಖಂಡ ಡಿಜಿಪಿ ಮತ್ತು ಹರಿದ್ವಾರದ ಹೆಚ್ಚುವರಿ ಎಸ್ಪಿ ಅವರಿಗೂ ನೋಟಿಸ್ ನೀಡಿದೆ.
ಈ ಪಿಐಎಲ್, ಅಂತರ್ಜಾಲದಲ್ಲಿ ಅಶ್ಲೀಲ ವಿಡಿಯೊಗಳನ್ನು ಹರಿಬಿಟ್ಟು ಬ್ಲಾಕ್ ಮೇಲ್ ಮಾಡುವ ವಿಷಯಕ್ಕೆ ಸಂಬಂಧಿಸಿದ್ದಾಗಿದೆ. ಹರಿದ್ವಾರ ಮೂಲದ ವಕೀಲರು ಸಲ್ಲಿಸಿರುವ ಈ ಅರ್ಜಿಯಲ್ಲಿ, 'ನಕಲಿ ಫೇಸ್ಬುಕ್ ಐಡಿಗಳಿಂದ ಫ್ರೆಂಡ್ರಿಕ್ವೆಸ್ (ಸ್ನೇಹಕ್ಕಾಗಿ ಕೋರಿಕೆ) ಕಳುಹಿಸಿ, ಆ ಮನವಿ ಸ್ವೀಕರಿಸಿದ ಮೇಲೆ, ಅವರ ಖಾತೆಗಳಲ್ಲಿರುವ ವಿಡಿಯೊ, ಚಿತ್ರಗಳನ್ನು ಬಳಸಿ ಕೊಂಡು ಅಶ್ಲೀಲ ದೃಶ್ಯ, ಚಿತ್ರಗಳನ್ನಾಗಿ ಬದಲಿಸುತ್ತಾರೆ(ಎಡಿಟ್ ಮಾಡಿ). ತಿರುಚಿದ ಇಂಥ ವಿಡಿಯೊಗಳನ್ನು ಸಂಬಂಧಿಸಿದವರಿಗೆ ಕಳಿಸಿ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಾರೆ. ನನಗೂ ಇಂಥದ್ದೇ ವಿಡಿಯೊ ಕಳಹಿಸಿ ಬ್ಲಾಕ್ ಮಾಡಿದ್ದರು. ಆ ನಂತರ ನಾನು ಹರಿದ್ವಾರದ ಎಸ್ಪಿ ಮತ್ತು ಡಿಜಿಪಿ ಹಾಗೂ ರಾಜ್ಯದ ಗೃಹ ಕಾರ್ಯದರ್ಶಿಯವರಿಗೆ ದೂರು ನೀಡಿದೆ. ಆದರೆ, ಈ ದೂರಿನ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿರುವ ಪಿಐಎಲ್ ನಲ್ಲಿ ತಿಳಿಸಿದ್ದಾರೆ.
ಈ ಘಟನೆ ನಂತರ, ವಕೀಲರು ಆರ್ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸಿ, ಇಂಥ ಎಷ್ಟು ಪ್ರಕರಣಗಳಲ್ಲಿ ಎಫ್ಐಆರ್ ದಾಖಲಾಗಿವೆ ಎಂದು ಪೊಲೀಸ್ ಇಲಾಖೆಯನ್ನು ಕೇಳಿದ್ದರು. ಇದಕ್ಕೆ ದೊರೆತ ಉತ್ತರದ ಪ್ರಕಾರ, ನಲ್ವತ್ತೈದು ಸಂತ್ರಸ್ತರು ಇದೇ ರೀತಿಯ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿದ್ದಾರೆ. ಆ ದೂರುಗಳು ಇನ್ನೂ ಪರಿಗಣನೆಯಲ್ಲೇ ಇವೆ' ಎಂದು ವಕೀಲರು ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಪ್ರವಾಸಿಗರಿಲ್ಲದೆ ಭಣಗುಟ್ಟುತ್ತಿರುವ ವಿಶ್ವವಿಖ್ಯಾತ ಹಂಪಿ: ಸಂಕಷ್ಟದಲ್ಲಿ ಗೈಡ್ಗಳು