Select Your Language

Notifications

webdunia
webdunia
webdunia
webdunia

ನಗರದಲ್ಲಿ ಸೈಬರ್ ವಂಚಕರು..!

ನಗರದಲ್ಲಿ ಸೈಬರ್ ವಂಚಕರು..!
bangalore , ಭಾನುವಾರ, 15 ಆಗಸ್ಟ್ 2021 (21:32 IST)
ಪೆಟ್ರೋಲ್ ಬಂಕ್‍ನ ಪರವಾನಗಿ ಕೊಡಿಸುವುದಾಗಿ ನಂಬಿಸಿ ನಗರದ ಅರ್ಜಿದಾರರ ಬಳಿ ಸೈಬರ್ ವಂಚಕರು ಬರೋಬ್ಬರಿ 55.43 ಲಕ್ಷ ರೂ. ಪಡೆದು ವಂಚಿಸಿದ್ದಾರೆ.
ಜಯನಗರದ ನಿವೇದಿತಾ ಪಿ. ಕಬಾಡಿ ಎಂಬುವರು ವಂಚನೆಗೊಳಗಾಗಿದ್ದು, ಈ ಸಂಬಂಧ ಸೈಬರ್ ಕ್ರೈಂ ಪೆÇಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೆಟ್ರೋಲ್ ಬಂಕ್ ತೆರೆಯುವ ಉದ್ದೇಶದಿಂದ ದೂರುದಾರರು ಇಂಡಿಯನ್ ಆಯಿಲ್ ಕಾಪೆರ್Çರೇಷನ್ ಪ್ರೈ.ಲಿ. ವೆಬ್‍ಸೈಟ್ ಹುಡುಕಿ ಅದರಲ್ಲಿದ್ದ ಇ-ಮೇಲ್ ಐಡಿಗೆ ಅರ್ಜಿಯನ್ನು ಭರ್ತಿ ಮಾಡಿ ಅಪ್‍ಲೋಡ್ ಮಾಡಿದ್ದರು.
ಆ ನಂತರ ಕೆಲ ದಿನಗಳ ಬಳಿಕ ಅಪರಿಚಿತ ವ್ಯಕ್ತಿ, ನಿವೇದಿತಾ ಅವರಿಗೆ ಕರೆ ಮಾಡಿ ಪೆಟ್ರೋಲ್ ಬಂಕ್‍ಗೆ ಪರವಾನಗಿ ಕೊಡಿಸುತ್ತೇವೆ. ಅದಕ್ಕೆ ಶುಲ್ಕ ಪಾವತಿ ಮಾಡಬೇಕೆಂದು ಹೇಳಿದ್ದಾನೆ. ಅದಕ್ಕೆ ಒಪ್ಪಿದ ದೂರುದಾರರಿಂದ ಆರಂಭದಲ್ಲಿ ಕಡಿಮೆ ಹಣವನ್ನು ಆನ್‍ಲೈನ್‍ನಲ್ಲಿ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಅರ್ಜಿ ಸ್ವೀಕರಿಸಿ ಮುಂದಿನ ಹಂತಕ್ಕೆ ರವಾನೆ ಮಾಡಿರುವುದಾಗಿ ಹೇಳಿದ ವಂಚಕರು, ಹಂತ- ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ 55.43 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡು ಮತ್ತೆ ಹಣಕ್ಕೆ ಬೇಡಿಕೆವೊಡ್ಡಿದ್ದಾರೆ. ಅನುಮಾನ ಬಂದು ಹಣ ವಾಪಸ್ ಕೇಳಿದಾಗ ಸಂಪರ್ಕ ಕಡಿತ ಮಾಡಿಕೊಂಡಿದ್ದಾನೆ. ದಿಕ್ಕು ತೋಚದ ದೂರುದಾರರು, ದಕ್ಷಿಣ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ನಿವೇದಿತಾ ನೀಡಿದ ದೂರಿನ ಮೇರೆಗೆ ತನಿಖೆ ಮುಂದುವರಿದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಇನ್ನೂ ಮೂರು ದಿನ ಮಳೆ: ಹವಾಮಾನ ಇಲಾಖೆ