Select Your Language

Notifications

webdunia
webdunia
webdunia
webdunia

ಡೆಡ್ಲಿ ವೈರಸ್ ಸೃಷ್ಟಿ : ಭಾರತಕ್ಕಿದೆಯಾ ಆಪತ್ತು?

ಡೆಡ್ಲಿ ವೈರಸ್ ಸೃಷ್ಟಿ : ಭಾರತಕ್ಕಿದೆಯಾ ಆಪತ್ತು?
ಇಸ್ಲಾಮಾಬಾದ್ , ಬುಧವಾರ, 9 ನವೆಂಬರ್ 2022 (12:00 IST)
ಇಸ್ಲಾಮಾಬಾದ್ : ಕೊರೊನಾ ವೈರಸ್ನಿಂದ ಈಗಷ್ಟೇ ಜಗತ್ತು ಚೇತರಿಸಿಕೊಳ್ಳುತ್ತಿದೆ. ಹೀಗಿರುವಾಗಲೇ ಚೀನಾ ಹಾಗೂ ಪಾಕಿಸ್ತಾನ ಜೈವಿಕ ಅಸ್ತ್ರ ಅಭಿವೃದ್ಧಿಪಡಿಸುವ ರಹಸ್ಯ ಸಂಶೋಧನೆ ನಡೆಸುತ್ತಿವೆ ಎಂಬ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.

ಪಾಕಿಸ್ತಾನದ ರಾವಲ್ಪಿಂಡಿಯ ಪ್ರಯೋಗಾಲಯ ಬಳಸಿಕೊಂಡು ಕೋವಿಡ್ಗಿಂತಲೂ ಭೀಕರವಾದ ಹಾಗೂ ಅದಕ್ಕಿಂತ ಹೆಚ್ಚು ಹಾನಿ ಉಂಟುಮಾಡಬಹುದಾದ ವೈರಸ್ ಅನ್ನು ಚೀನಾ ಸೃಷ್ಟಿಸಲು ಹೊರಟಿದೆ ಎಂದು ಹಲವು ಜಾಗತಿಕ ಮಾಧ್ಯಮಗಳು ವರದಿ ಮಾಡಿವೆ.

ಜೈವಿಕ ಅಸ್ತ್ರ ಕುರಿತು ಸಂಶೋಧನೆ ನಡೆಸುವ ಸಲುವಾಗಿ ವಿಶ್ವಕ್ಕೆ ಕೋವಿಡ್ ಹಬ್ಬಿಸಿದ ಕುಖ್ಯಾತಿ ಹೊಂದಿರುವ ಚೀನಾದ ವುಹಾನ್ ವೈರಾಲಜಿ ಸಂಸ್ಥೆ ಹಾಗೂ ಪಾಕಿಸ್ತಾನದ ರಕ್ಷಣಾ ವಿಜ್ಞಾನ-ತಂತ್ರಜ್ಞಾನ ಸಂಸ್ಥೆಗಳು ಅತ್ಯಾಧುನಿಕ ವೈಜ್ಞಾನಿಕ ಮೂಲಸೌಕರ್ಯ ಸೃಷ್ಟಿಸಿವೆ.


Share this Story:

Follow Webdunia kannada

ಮುಂದಿನ ಸುದ್ದಿ

ಭಾರತ್ ಎಕ್ಸ್‌ಪ್ರೆಸ್‍ಗೆ ಮೊದಲ ಬಲಿ !