Select Your Language

Notifications

webdunia
webdunia
webdunia
webdunia

ವಸ್ತುಗಳ ಮೇಲೂ ಉಳಿಯಬಹುದು ಮಂಕಿಪಾಕ್ಸ್ !

ವಸ್ತುಗಳ ಮೇಲೂ ಉಳಿಯಬಹುದು ಮಂಕಿಪಾಕ್ಸ್ !
ವಾಷಿಂಗ್ಟನ್ , ಸೋಮವಾರ, 22 ಆಗಸ್ಟ್ 2022 (12:07 IST)
ವಾಷಿಂಗ್ಟನ್ : ಮನೆಯಲ್ಲಿರುವ ಸಾಮಾನ್ಯ ವಸ್ತುಗಳ ಮೇಲೆ ಹಲವು ದಿನಗಳವರೆಗೂ ಮಂಕಿಪಾಕ್ಸ್ ವೈರಸ್ ಉಳಿಯುವ ಸಾಧ್ಯತೆಗಳಿದೆ.

ಆದರೆ ಇದರಿಂದ ಸೋಂಕು ಹರಡಬಹುದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಯುಎಸ್ ರೋಗ ನಿಯಂತ್ರಣ ಸಂಸ್ಥೆ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ವರದಿ ಹೇಳಿದೆ.

ಸಂಸ್ಥೆ ಇದಕ್ಕೆ ವಿಶೇಷ ಅಧ್ಯಯನ ನಡೆಸಿದ್ದು, ಅಧ್ಯಯನಕ್ಕಾಗಿ ಇಬ್ಬರು ಮಂಕಿಪಾಕ್ಸ್ ರೋಗಿಗಳ ಮನೆಯನ್ನು ಬಳಸಿಕೊಳ್ಳಲಾಗಿದೆ. ರೋಗಿಗಳು ದಿನಕ್ಕೆ ಹಲವಾರು ಬಾರಿ ತಮ್ಮ ಕೈಗಳನ್ನು ತೊಳೆದುಕೊಳ್ಳುತ್ತಾರೆ ಮತ್ತು ನಿಯಮಿತವಾಗಿ ಸ್ನಾನ ಮಾಡುತ್ತಾರೆ. ಅದಾಗ್ಯೂ ಅವರ ಮನೆಯ ಸಾಮಾನ್ಯ ವಸ್ತುಗಳ ಮೇಲೆ ಸೋಂಕು ಪತ್ತೆಯಾಗಿದೆ.

ಸಿಡಿಸಿ ಪ್ರಕಾರ, ರೋಗಲಕ್ಷಣಗಳು ಪ್ರಾರಂಭವಾದ 20 ದಿನಗಳ ನಂತರ ಶೇ.70 ಪ್ರತಿಶತದಷ್ಟು ಹೆಚ್ಚಿನ ಸಂಪರ್ಕದ ಪ್ರದೇಶಗಳಲ್ಲಿ ಸಂಶೋಧಕರು ವೈರಸ್ ಅನ್ನು ಕಂಡುಕೊಂಡಿದ್ದಾರೆ.

ಮಂಚಗಳು, ಹೊದಿಕೆಗಳು, ಕಾಫಿ ಯಂತ್ರ, ಕಂಪ್ಯೂಟರ್ ಮೌಸ್ ಮತ್ತು ಲೈಟ್ ಸ್ವಿಚ್ಬೋರ್ಡ್ಗಳಲ್ಲಿ ಮಂಕಿಪಾಕ್ಸ್ ವೈರಸ್ ಪತ್ತೆಯಾಗಿದೆ. ಆದರೆ ಇದರ ಹರಡುವಿಕೆಯ ಬಗ್ಗೆ ಸ್ಪಷ್ಟತೆ ಇಲ್ಲ. ಮನೆಯಲ್ಲಿ ಸ್ವಚ್ಛತೆ ಕಾಯ್ದುಕೊಂಡರೇ ಯಾವುದೇ ಅಪಾಯಗಳಿಲ್ಲ ಎಂದು ತಜ್ಞರು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂಟರ್‌ನೆಟ್ ಸ್ಥಗಿತಗೊಳಿಸಿದ ಸರ್ಕಾರ !