Select Your Language

Notifications

webdunia
webdunia
webdunia
webdunia

ವಿಮಾ ಹಣಕ್ಕಾಗಿ ದತ್ತು ಪುತ್ರನಿಗೆ ದುರ್ಗತಿ ತಂದ ದಂಪತಿ

ವಿಮಾ ಹಣಕ್ಕಾಗಿ ದತ್ತು ಪುತ್ರನಿಗೆ ದುರ್ಗತಿ ತಂದ ದಂಪತಿ
ಲಂಡನ್ , ಭಾನುವಾರ, 20 ಅಕ್ಟೋಬರ್ 2019 (07:11 IST)
ಲಂಡನ್ : ವಿಮಾ ಹಣಕ್ಕಾಗಿ ಭಾರತೀಯ ದಂಪತಿ ದತ್ತು ಪುತ್ರನನ್ನು ಸುಫಾರಿ ಕೊಟ್ಟು ಕೊಲೆ ಮಾಡಿಸಿದ ಘಟನೆ ಲಂಡನ್ ನಲ್ಲಿ ನಡೆದಿದೆ.




ಹ್ಯಾನ್ ವೆಲ್ ನ ಆರತಿ ಧರ್ ಹಾಗೂ ಕವಲ್ ರೈಜಾದಾ ಎನ್ನುವ ದಂಪತಿ  ಗುಜರಾತ್ ನ ಕೇಶೋಡ್ ನಿಂದ ಗೋಪಾಲ್ ಸೇಜನಿ ಎಂಬ ಅನಾಥ ಹುಡುಗನನ್ನು ದತ್ತು ತೆಗೆದುಕೊಂಡಿದ್ದರು. ಬಳಿಕ ಅವನ ಹೆಸರಿನಲ್ಲಿ 1.36 ಕೋಟಿ ರೂ ಮೊತ್ತದ ವಿಮೆ ಮಾಡಿ 2 ಕಂತು ಕಟ್ಟಿದ್ದರು. ಆದರೆ  ಆ ಹುಡುಗನನ್ನು ದುಷ್ಕರ್ಮಿಗಳು ಅಪಹರಿಸಿ ಕೊಲೆ ಮಾಡಿದ್ದರು.


ಈ ಪ್ರಕರಣದ ತನಿಖೆ ನಡೆಸಿದ ಅಧಿಕಾರಿಗಳು ವಿಮೆ ಹಣಕ್ಕಾಗಿ ದಂಪತಿಗಳೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಹಿನ್ನಲೆಯಲ್ಲಿ  ಅವರನ್ನು ಇಂಗ್ಲೆಂಡ್ ಪೊಲೀಸ್ ಬಂಧಿಸಿದ್ದಾರೆ.  


Share this Story:

Follow Webdunia kannada

ಮುಂದಿನ ಸುದ್ದಿ

ಈ ದಿನದಂದು ದೇಶದಾದ್ಯಂತ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದ ಬ್ಯಾಂಕ್ ಸಂಘಟನೆಗಳು