ವಾಷಿಂಗ್ಟನ್ : ಏರ್ಪೋರ್ಟ್ನಲ್ಲಿ ನಡೆದ ಏರ್ ಶೋನಲ್ಲಿ ಪರಸ್ಪರ 2 ವಿಮಾನಗಳು ಡಿಕ್ಕಿ ಹೊಡೆದು ಸ್ಪೋಟಗೊಂಡು 6 ಮಂದಿ ಸಾವನ್ನಪ್ಪಿದ ಘಟನೆ ಅಮೆರಿಕದ ಟೆಕ್ಸಾಸ್ನ ಡಲ್ಲಾಸ್ನಲ್ಲಿ ನಡೆದಿದೆ.
ಏರ್ ಶೋ ಪ್ರದರ್ಶನದಲ್ಲಿ ಈ ಘಟನೆ ನಡೆದಿದ್ದು, ಇದೀಗ ಈ 2 ವಿಮಾನಗಳು ಸ್ಫೋಟಗೊಂಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಏರ್ ಶೋದಲ್ಲಿ ಭಾಗವಹಿಸಿರುವ ಜನರು ಈ ವೀಡಿಯೋವನ್ನು ಸೆರೆ ಹಿಡಿದಿದ್ದಾರೆ.
2 ವಿಮಾನಗಳಾದ ಬಿ -17 ಬೊಂಬರ್ ಹಾಗೂ ಬೆಲ್ ಪಿ-63 ಕಿಂಗ್ ಕೋಬ್ರಾ ವಿಮಾನಗಳು ಏರ್ ಶೋನಲ್ಲಿ ಹಾರಾಟ ನಡೆಸುತ್ತಿತ್ತು. ಈ ವೇಳೆ ಬಿ – 17 ಬೊಂಬರ್ ವಿಮಾನಕ್ಕೆ ಬೆಲ್ ಪಿ -63 ವಿಮಾನ ಡಿಕ್ಕಿ ಹೊಡೆದು ಸ್ಫೋಟಗೊಂಡಿದೆ.